ಬೆಳಗಾವಿ. ಅಥಣಿ
ಕೋಹಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಗಳಿ ಪೊಲೀಸ್ ಠಾಣೆಯ ಪಿ ಎಸ್ ಐ ಪವಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಕೇಂದ್ರ ಶಶಸ್ತ್ರ ಸೀಮಾ ಬಲ ತಂಡದ ಸಿಬ್ಬಂದಿಯಿಂದ ಆಕರ್ಷಕ ಪಥ ಸಂಚಲನ ಮಂಗಳವಾರ ಕೋಹಳ್ಳಿಯಲ್ಲಿ ಜರುಗಿತು.
ಕೋಹಳ್ಳಿ ಹನುಮಾನ ಮಂದಿರದಿಂದ ಆರಂಭವಾದ ಪಥ ಸಂಚಲನ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ವೃತ, ಶಿವಾಜಿ ವೃತ ಕನಕದಾಸರು ವೃತದ ಮೂಲಕ ಪ್ರಮುಖ ಬೀದಿಯಲ್ಲಿ ಹಾಯ್ದು ಹನುಮಾನ ದೇವಸ್ಥಾನದ ಆವರಣದಲ್ಲಿ ಸಮಾರೋಪಗೊಂಡಿತು. ಮಾರ್ಗದ ಮಧ್ಯದಲ್ಲಿ ಗ್ರಾಮದ ಯುವಕರಾದ ಮಹೇಶ ಕಾಳೆ ಮತ್ತು ತುಖಾರಾಮ ಸೇರಿದಂತೆ ಇನ್ನಿತರು ಭದ್ರತಾ ಸಿಬ್ಬಂದಿಗಳಿಗೆ ಹೂ ಹಾರಿಸುವ ಮೂಲಕ ಗೌರವ ಪೂರ್ವಕ ಸ್ವಾಗತಿಸಿದರು.
ಈ ವೇಳೆ ಐಗಳಿ ಪಿ ಎಸ್ ಐ ಪವಾರ ಕೇಂದ್ರ ಶಶಸ್ತ್ರ ಸೀಮಾ ಬಲ ಪಡೆಯ ಅಧಿಕಾರಿಗಳನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಸ್ವಾಗತಿಸಿ ಮಾತನಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಹೋಗಲಾಡಿಸಿ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನದ ಹಕ್ಕನ್ನು ಚಲಾಯಿಸುವಂತೆ ನೋಡಿಕೊಳ್ಳುವುದು.
ನಮ್ಮೆಲ್ಲರ ಕರ್ತವ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯೊಂದಿಗೆ ಕೇಂದ್ರ ಶಶಸ್ತ್ರ ಸೀಮಾ ಬಲ ಪಡೆಯ ಯೋಧರು ಅಗಮಿಸಿರುವುದು ನಮ್ಮ ಇಲಾಖೆಗೆ ಮತ್ತಷ್ಟು ಬಲ ತುಂಬಿದಂತಾಗಿದೆ.ಯೋಧರು ಮತ್ತು ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿಗಳು ಒಂದಾಗಿ ಮುಂಬರುವ ಚುನಾವಣೆಯನ್ನು ಶಾಂತಿ ಸುವ್ಯವಸ್ಥಿತವಾಗಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆಯ ಕಾಪಾಡುವ ಹಿತ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ಜೊತೆಗೆ ಕೇಂದ್ರ ಶಶಸ್ತ್ರ ಸೀಮಾ ಬಲದ ಪಡೆಯ ಸಿಬ್ಬಂದಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಸಾರ್ವಜನಿಕರು ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸದೆ ಒಳ್ಳೆಯ ರೀತಿಯ ಗೌರವದಿಂದ ನಡೆದುಕೊಳ್ಳಬೇಕು.ಏನಾದರೂ ತಂಟೆತಕರಾರು ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಕಮಾಂಡರ್ ಐಗಳಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.