ಅಖಿಲ ಭಾರತ ಮಟ್ಟದಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಭಾರತಿಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ಕಾನೂನು ಸಲಹೆಗಾರರಾಗಿ ದೆಹಲಿಯಲ್ಲಿರುವ ಖ್ಯಾತ ವಕೀಲ ಸುಭಾಷ್ ಚಂದ್ರ ವಶಿಷ್ಠ ಅವರು ನೇಮಕಗೊಂಡಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿವ್ಯಾಂಗರ ಹಕ್ಕುಗಳಿಗಾಗಿ ಹಲವು ದಶಕಗಳಿಂದ ವಿವಿಧ ನ್ಯಾಯಾಲಯಗಳಲ್ಲಿ ಯಶಸ್ವೀ ಹೊರತನಡೆಸುತ್ತಿರುವ ಅಡ್ವೊಕೇಟ್ ಸುಭಾಷ್ ಚಂದ್ರ ವಶಿಷ್ಠ ಅವರಿಗೆ ಅಂಗವಿಕಲರು ಶುಭ ಹಾರೈಸಿದ್ದಾರೆ.