ವರದಿ: ರಾಜಶೇಖರ ಶೇಗುಣಸಿ
ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನೂತನವಾಗಿ ಆರಂಬಗೊಳ್ಳುತ್ತಿರುವ ಮುಧೋಳ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ ಉದ್ಘಾಟನಾ ಸಮಾರಂಭ ದಿನಾಂಕ 11.11.2024 ರಂದು ಬೆಳಿಗ್ಗೆ 11.30 ಕ್ಕೇ ಮುಗಳಖೋಡ್ ಹಾಗೂ ಜೀಡಗಾ ಶ್ರೀ ಮಠದ ಪೀಠಾಧಿಪತಿಗಳು ಆದ ಡಾಕ್ಟರ್ ಶ್ರೀ ಮುರುಘರಾಜೇಂದ್ರ ಅಪ್ಪಾಜಿ ಹಾಗೂ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆ ಆಗಲಿದ್ದು,
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬೆಳಗಾವಿ ಸಂಸದರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀ ಸತೀಶ್ ಜಾರಕಿಹೊಳಿ, ಪ್ರತಾಪ ಅಣ್ಣಾ ಪಾಟೀಲ್ ಉಪಾಧ್ಯಕ್ಷರು ರಾಷ್ಟೀಯ ಜನತಾ ದಳ, ಅರಭಾವಿ ಮತಕ್ಷೇತ್ರದ ಶಾಸಕರು ಆದ ಶ್ರೀ ಬಾಲಚಂದ್ರ ಜಾರಕಿಹೊಳಿ , ಕುಡಚಿ ಮತಕ್ಷೇತ್ರದ ಶಾಸಕರು ಮಹೇಂದ್ರ ತಮ್ಮನವರ್, ತೇರದಾಳ ಮತಕ್ಷೇತ್ರದ ಶಾಸಕರು ಸಿದ್ದು ಸವದಿ, ಬಾಗಲಕೋಟೆ ಜಿಲ್ಲೆಯ ಕಮಿಷನರ್ ಆದ ಶ್ರೀ ಶ್ವೇತಾ ಬಿಡಿಕರ್, ಪಿ ರಾಜೀವ, ಶ್ರೀ ಸರ್ವೋತ್ತಮ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಆದ ಡಾಕ್ಟರ್ ಸಿ ಬೀ ಕುಲೀಗೊಡ ಅವರು ಆಗಮಿಸುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ಜನರಲ್ ಮೇಡಿಸಿನ ವಿಭಾಗ, ಸ್ತ್ರೀ ರೋಗ ಪ್ರಸೂತಿ ವಿಭಾಗ, ದಂತ ವಿಭಾಗ, ಯುರೋಲಜಿ, ಶಸ್ತ್ರ ಚಿಕಿತ್ಸೆ , ಎಲುಬು& ಕೀಲು , ಚಿಕ್ಕ ಮಕ್ಕಳ ವಿಭಾಗ, ನರ ರೋಗ ವಿಭಾಗ ಹೀಗೆ ಹತ್ತು ಹಲವು ಸೌಲಭ್ಯಗಳು ನೂತನವಾಗಿ ಪ್ರಾರಂಭವಾಗುವ ಮುಧೋಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲ ಸರಕಾರಿ ಸೌಲಭ್ಯಗಳು ಕೂಡ ದೊರೆಯುತ್ತವೆ, ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಆಗಮಿಸುತ್ತಿರುವ ವೈದ್ಯರು ಹಾಗೂ ಸ್ಥಳೀಯ ವೈದ್ಯರುಗಳು, ಊರಿನ ಗಣ್ಯರು, ಆಗಮಿಸುತ್ತಿದ್ದಾರೆ, ಆದರಿಂದ ಈ ಭವ್ಯವಾದ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಡಾಕ್ಟರ್ ವಿನೋದ್ ಮುಧೋಳ್ ಹಾಗೂ ಸಹಚರ ವೈದ್ಯರ ಬಳಗ ತಿಳಿಸಿದೆ.