ವರದಿ: ರಾಜಶೇಖರ ಶೇಗುಣಸಿ
ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬ.ನೀ.ಕುಲಿಗೋಡ ಹೈಸ್ಕೂಲ್ ವಿಭಾಗದ ಪಲಿತಾಶ 87.56% ಆಗಿದೆ.
ಅಶ್ವಿನಿ ಮದಿಹಳ್ಳಿ 625 ಕ್ಕೆ 605 ಅಂಕಗಳನ್ನು ಪಡೆದು ಪ್ರತಿಶತ 96.80% ಮಾಡಿ ಪ್ರಥಮ ಸ್ಥಾನ, ಕುಮಾರ್ ರಮೇಶ್ ಕುಳಲಿ 597 ಅಂಕ ಪಡೆದು ಪ್ರತಿಶತ 95.52% ದ್ವಿತೀಯ ಸ್ಥಾನ, ಹಾಗೂ ಲಕ್ಷ್ಮಿ ಯರಡೆತ್ತಿ 581 ಅಂಕಗಳನ್ನು ಗಳಿಸಿ ಪ್ರತಿಶತ 92.96% ಪಡೆದು ತೃತೀಯ ಸ್ಥಾನ ಪಡೆದು ಕಾಲೇಜನ ಕೀರ್ತಿ ಹೆಚ್ಚಿಸಿದ್ದಾರೆ.
ಒಟ್ಟು 191 ಜನ ವಿದ್ಯಾರ್ಥಿಗಳಲ್ಲಿ 167 ಜನ ಪಾಸ್ ಆಗಿದ್ದಾರೆ,
ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ್ ಕುಲಿಗೋಡ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಡಾ. ಸಿ.ಬಿ. ಕುಲಿಗೋಡ, ಉಪಾಧ್ಯಕ್ಷರಾದ ಪ್ರಕಾಶ್ ಆದಪ್ಪಗೋಳ, ಕಾರ್ಯದರ್ಶಿ ಪರಪ್ಪ ಖೇತಗೌಡರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರಾದ ಶ್ರೀ ಸಂಜಯ ಮದಾಳೆ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಶುಭ ಹಾರೈಸಿದ್ದಾರೆ.