ಮುಗಳಖೋಡ:ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆ

Share the Post Now

ವರದಿ :ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ


ಸಮಾಜದ ದಾರಿ ದೀಪ ಸಾವಿತ್ರಿಬಾಯಿ ಫುಲೆ: ಡಾ ಸಿ ಬಿ ಕುಲಿಗೋಡ

ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಎಲ್ಲ ಅಂಗ ಸಂಸ್ಥೆಗಳ ಆಶ್ರಯದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.


ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರು ಇಡೀ ಸಮಾಜಕ್ಕೆ ದಾರಿ ದೀಪ ಆಗಿದ್ದಾರೆ ಇವರಿಂದ ಇಂದು ಎಲ್ಲರೂ ಸಮಾನ ಅವಕಾಶ ಸಿಕ್ಕಂತಾಗಿದೆ. ಇಂದು ನಾವೆಲ್ಲರೂ ಆ ತಾಯಿಯ ಆರ್ದಶಗಳನ್ನು ಅಳವಡಿಸಿಕೊಂಡು ಬಾಳೋಣ ಎಂಬ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.



ನಂತರ ಈ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಎಸ್ ಎಸ್ ಮಧಾಳೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಪ್ರೊ.ಪ್ರಕಾಶ ಚ ಕಂಬಾರ, ಡಾ.ಎಂ.ಕೆ.ಬೀಳಗಿ, ಎಸ್ ಎಸ್ ಮಧಾಳೆ, ಪ್ರಕಾಶ ಕುಲಿಗೋಡ, ಬಿ.ಎ ಕೊಪ್ಪದ, ರಮೇಶ ಗುಳಪ್ಪನವರ ಹಾಗೂ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಜೆ.ಬಿ.ಮೇಕನಮರಡಿ ನಿರೂಪಿಸಿದರು, ಪ್ರೊ.ಸಂಗಮೇಶ ಹಿರೇಮಠ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!