ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಂಭ್ರಮದ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಮಯದಲ್ಲಿ ತಾಯಿ ಕನ್ನಡಾಂಬೆ ಹಾಗೂ ಆಲೂರು ವೆಂಕಟರಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಅದರೊಂದಿಗೆ ಉಳಿದ ಅಂಗ ಸಂಸ್ಥೆಗಳಾದ ರೈನಬೋ ಸೆಂಟ್ರಲ್ ಸ್ಕೂಲ್, ಬಿ.ಎನ್.ಕೆ ಹೈಸ್ಕೂಲ್, ಬಿ.ಎನ್.ಕೆ ಪಿಯು ಕಾಲೇಜು, ಬಾ.ಸಿ.ಮ ಪ್ರಾಥಮಿಕ ಶಾಲೆ ಹಾಗೂ ಐ.ಟಿ.ಐ ಕಾಲೇಜಿನ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿ ಸರ್ಕಾರ ನಿಗದಿಪಡಿಸಿದ ಹಾಡುಗಳನ್ನು ಸಾಮೂಹಿಕವಾಗಿ ಗಾಯನ ಮಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ ಪ್ರಕಾಶ ಚ ಕಂಬಾರ, ಪ್ರಾಧ್ಯಾಪಕರಾದ ಸಂಗಮೇಶ ಹಿರೇಮಠ, ಆರ್ ಎಸ್ ಶೇಗುಣಸಿ, ಪ್ರದೀಪ್ ನಾಯಿಕ, ಎಚ್.ಎಂ.ಕಂಕಣವಾಡಿ, ಎಸ್ ಎಸ್ ಮಧಾಳೆ, ಪಿ.ಜಿ.ಕುಲಿಗೋಡ, ಬಾಹುಬಲಿ ನೇಗಿನಾಳ, ಎನ್.ಆರ್.ಡಾಂಗೆ, ಎಸ್.ಎಂ.ತಮದಡ್ಡಿ, ಪಿ.ಎಸ್.ಮಗದುಮ್, ಸಂಜೀವ ಪಣದಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಕಾಶ ಮಗದುಮ್ ನಿರೂಪಿಸಿದರು ಹಾಗೂ ಎಸ್.ಬಿ.ಚೌಗಲಾ ವಂದಿಸಿದರು.