ಮುಗಳಖೋಡ :ಸಂವಿಧಾನ ದಿನಾಚರಣೆ ಆಚರಿಸಲಾಯಿತು

Share the Post Now

ವರದಿ: ಶ್ರೀ ಪ್ರಕಾಶ ಕಂಬಾರ

ಪದವಿ ಕಾಲೇಜಿನಲ್ಲಿ ಸಂವಿದಾನ ದಿನಾಚರಣೆ
ಮುಗಳಖೋಡ : ಪಟ್ಟಣದ ಶ್ರೀ ಚ ವಿ ವ ಸಂಘದ ಡಾ ಸಿ ಬಿ ಕುಲಿಗೋಡ ಪದವಿ ಕಾಲೇಜಿನಲ್ಲಿ ಐ ಕ್ಯೂ ಎ ಸಿ, ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಸಂವಿಧಾನ ದಿನ ಹಾಗೂ ಸಂವಿಧಾನದ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಪ್ರಕಾಶ ಚ ಕಂಬಾರ ವಹಿಸಿದ್ದರು. ಶ್ರೀ ಎಚ್ ಎಮ್ ಕಂಕಣವಾಡಿ, ಶ್ರೀ ಎಸ್ ಎಸ್ ಕುಲಿಗೋಡ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ  ಶ್ರೀ ವಿ ಕೆ ಹುಂಡರಗಿ ಸಂವಿಧಾನದ ಪೂರ್ವ ಪೀಠಿಕೆ ಭಾಗವನ್ನು ಓದುತ್ತಾ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಓದಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಎಸ್ ಎಸ್ ಹಿರೇಮಠ, ಶ್ರೀ ಪಿ ಎ ನಾಯಕ, ಶ್ರೀ ಎಸ್ ಆರ್ ತೇಲಿ, ಮಿಸ್. ಆರ್.ಎಮ್ ಖೇತಾಗೌಡರ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

error: Content is protected !!