.
29 ಕ್ಕೆ ಮಂಗಳವಾರ ಸರ್ಕಾರ ಸ್ಪಂದಿಸದಿದ್ದರೆ, ನಿರಂತರವಾಗಿ ಧರಣಿ ಸತ್ಯಾಗ್ರಹ….
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಇತ್ತೀಚಿನ ದಿನಗಳಲ್ಲಿ ಭೂಮಿಗೆ ನೀರು ಉಣಿಸಲು ಬೇಕಾಗುವಷ್ಟು ವಿದ್ಯುತ್ ರೈತರಿಗೆ ಸಿಗುತ್ತಿಲ್ಲ. ಈ ಕುರಿತು ರಾಯಭಾಗ ತಾಲ್ಲೂಕಿನ ರೈತರು ಸೇರಿ ಹಾರೂಗೇರಿ ಹೆಸ್ಕಾಂ ಹಾಗೂ ಬೇಳಗಾವಿ ಜಿಲ್ಲಾಧಿಕಾರಿಗಳ ಕಛೇರಿಗೆ ಈಗಾಗಲೇ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ.
ಸಮಸ್ಯೆಗೆ ಪರಿಹಾರ ಸಿಗದ ಕಾರಣ ಬೆಳಗಾವಿ, ಬಿಜಾಪೂರ, ಬಾಗಲಕೋಟ ಸೇರಿದಂತೆ 7 ಜಿಲ್ಲೆಯ ರೈತರು ಸೇರಿ ಮಂಗಳವಾರ ದಿನಾಂಕ 29 ರಂದು ಹುಬ್ಬಳ್ಳಿಯ ಹೇಸ್ಕಾಂ ಕಛೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ನಿರಂತರವಾಗಿ ಧರಣಿ ಸತ್ಯಾಗ್ರಹ ಮಾಡುವುದಾಗಿ ರಾಯಭಾಗ ತಾಲೂಕಿನ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ತಿಳಿಸಿದ್ದಾರೆ.
ಅವರು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಂಗಳವಾರ ನಡೆಯುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ 7 ಜಿಲ್ಲೆಯ ಎಲ್ಲ ರೈತ ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಪ್ಪ ಅಂಗಡಿ, ರಮೇಶ ಕಲ್ಲಾರ, ಸುರೇಶ ಹೊಸಪೇಟೆ, ಜಗದೇವ ಅಳಗೋಡಿ, ಕಲ್ಯಾಣಿ ಮಗದುಮ್ಮ, ಮಾಯಪ್ಪ ಲೋಕೂರೆ, ರಾಮಚಂದ್ರ ಉದ್ದಪ್ಪಗೋಳ, ಮಹಾದೇವ ಕರಗಾಂವಿ, ಅಶೋಕ ಕೊಪ್ಪದ, ಗಜಾನನ ಕೊಕಟನೂರ, ಮಹಾದೇವ ಹೊಳ್ಕರ, ರಂಗಪ್ಪ ಪಾಟೀಲ ಮಲ್ಲಪ್ಪ ಯರಗಾಣಿ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಹಸಿರು ಸೇನಾ ಸದಸ್ಯರು ಉಪಸ್ಥಿತರಿದ್ದರು.