ವರದಿ: ಸಂತೋಷ ಮುಗಳಿ
ಬೆಳಗಾವಿ :ಮುಗಳಖೋಡ : ಪಟ್ಟಣದಲ್ಲಿ ಗೆಳೆಯರ ಬಳಗದಿಂದ ಭಜರಂಗದಳದ ಕಟ್ಟೆಯ ಮೇಲೆ ಅ.15ರಂದು ಮಧ್ಯರಾತ್ರಿ 12 ಗಂಟೆಗೆ 77ನೇ ಸ್ವಾತಂತ್ರ್ಯೊತ್ಸವದ ಧ್ವಜಾರೋಹಣವನ್ನು ಹಾರೂಗೇರಿಯ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ ನೆರವೇರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಾಡು ನಮ್ಮ ನೆಲ, ಜಲ ಭಾಷೆ, ಮತ್ತು ರಾಷ್ಟ್ರದ ಮೇಲೆ ಗೌರವ ಇಟ್ಟುಕೊಳ್ಳಬೇಕು, ಹಾಗೂ ದೇಶಪ್ರೇಮ ಬೆಳೆಸಿಕೊಂಡು ಎಲ್ಲರನ್ನೂ ಪ್ರೀತಿಸಿ ನಡಿನ ಉತ್ತಮ ನಾಗರಿಕರಾಗಿ ಎಂದು ಹೇಳಿದರು.
ನಂತರ ಎ ಎಸ್ ಐ ಡಿ.ಎಸ್. ಚಿಕ್ಯಾಗುಂಡಿ ಮಾತನಾಡಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಸ್ವಾತಂತ್ರ್ಯ ಎನ್ನುವುದು ಬಹಳಷ್ಟು ಜನ ವೀರರ ಹೋರಾಟ, ತ್ಯಾಗ ಬಲಿದಾನದ ಪ್ರತಿಪಲದಿಂದ ದೊರೆತಿದೆ ಅದನ್ನು ನಾವು ರಕ್ಷಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಸ್ವಾತಂತ್ರ್ಯದ ಸಲುವಾಗಿ ಹೊರಾಡಿದ ಹೋರಾಟಗಾರರು ಮತ್ತು ಸೈನಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರಾದ ವಿಭಾಗದ ಪಿಎಸ್ಐ ಆರ್ ಆರ್ ಕಂಗನೊಳಿ, ಶಿರಪಾಲ ಕುರಬಳ್ಳಿ, ಶಿವಪ್ಪ ಹಳ್ಳೂರ, ಬಸವರಾಜ ಲಮಾಣಿ, ರಾಜು ನಾಯಿಕ, ರಾಜು ಮುಧೋಳ ಶ್ರೀಕಾಂತ ಖೇತಗೌಡರ, ಸುನಿಲ ನಾಯಿಕ, ಮಾಳು ಕಂಠಿಕಾರ, ಮೋಹನ ಲಮಾಣಿ, ರಮೇಶ್ ಹೋಸುರ ಮತ್ತಿತರು ಉಪಸ್ಥಿತರಿದ್ದರು.






