ಮುಗಳಖೋಡ:ಫಯಾಜ್‌ಗೆ ಗಲ್ಲು ಶಿಕ್ಷೆ ಕೊಡಿ: ಶ್ರೀ ಬಸವರಾಜೇಂದ್ರ ಸ್ವಾಮೀಜಿ.

Share the Post Now

*ವರದಿ: ರಾಜಶೇಖರ ಶೇಗುಣಸಿ*

ಪಕ್ಷಾತೀತವಾಗಿ ಸಾರ್ವಜನಿಕರ ಪ್ರತಿಭಟನೆ, ಮುಖ್ಯಾಧಿಕಾರಿಗೆ ಮನವಿ, ನೇಹಾ ಕುಟುಂಬಕ್ಕೆ ಸಾಂತ್ವನ.


ಮುಗಳಖೋಡ:  ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಲ್ಲೆ, ಕೊಲೆಗಳು ಈ ದೇಶಕ್ಕೆ ಮಾರಕವಾದದ್ದು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಭಾವನೆಗಳಿಗೆ ಸ್ಪಂದಿಸಿ ನೇಹಾಳನ್ನು ಕೊಲೆಗೈದ  ಹಂತಕನನ್ನು ಅತಿ ಶೀಘ್ರವಾಗಿ  ಗಲ್ಲಿಗೇರಿಸಬೇಕೆಂದು ಅಚಲೇರಿ ಜಿಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಗಣಪತಿ ದೇವಸ್ಥಾನದ ಮುಂದೆ ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಂಗಮ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಇನ್ನು ಮುಂದೆ ಯಾವುದೇ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ  ಘಟನೆಗಳನ್ನು ಗಮನಿಸಿ ಇವತ್ತಿನ ಯುವಕ, ಯುವತಿಯರು ಎಚ್ಚೆತ್ತುಕೊಂಡು, ಸಾಮಾಜಿಕ ಮಾಧ್ಯಮಗಳ ಗೋಜಿಗೆ ಹೋಗದೆ ತಂದೆ ತಾಯಿ ನೀಡುವ ಮಾರ್ಗದರ್ಶನದಲ್ಲಿ ನಡೆಯಬೇಕೆಂದರು.

ಪಟ್ಟಣದ ಮುಖಂಡರಾದ ಡಾ. ಸಿ.ಬಿ. ಕುಲಿಗೋಡ ಮಾತನಾಡಿ ಫಯಾಜನನ್ನು ನಾಲ್ಕು ಗೋಡೆಗಳ ಮಧ್ಯೆ ಜೈಲಿನಲ್ಲಿ ಇಡುವುದಕ್ಕಿಂತ ಸಾರ್ವಜನಿಕ ಸ್ಥಳಗಳಲ್ಲಿ ತಂದು ಸೂಟೌಟ್ ಮಾಡಬೇಕೆಂದು ತಮ್ಮ ಆಕ್ರೋಶ ಹೊರಹಾಕಿದರು.

ಪ್ರಮುಖರಾದ ಭೀಮಸಿ ಬನಶಂಕರಿ ಮಾತನಾಡಿ, ಪಟ್ಟಣದ ವಿವಿಧ ಸಂಘಟನೆಗಳ ಮೂಲಕ ಪಕ್ಷಾತೀತವಾಗಿ ಹಮ್ಮಿಕೊಂಡ ಈ ಪ್ರತಿಭಟನೆಯ ಉದ್ದೇಶ ಆರೋಪಿ ಫಯಾಜ್‌ಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಿ, ಹತ್ಯೆಯಾದ ನೇಹಾಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ನಂತರ  ಪಟ್ಟಣದ ಸಾರ್ವಜನಿಕರೆಲ್ಲ ಸೇರಿ, ಗಲ್ಲಿಗೇರಿಸಿ, ಗಲ್ಲಿಗೇರಿಸಿ, ಫಯಾಜ್‌ನನ್ನು ಗಲ್ಲಿಗೇರಿಸಿ, ಬೇಕೆ ಬೇಕು ನ್ಯಾಯ ಬೇಕು ಎಂಬ ಹಲವಾರು ಘೋಷಣೆಗಳನ್ನು ಕೂಗುತ್ತಾ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಹಂತಕ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಮನವಿ ಸಲ್ಲಿಸಿ ಕು. ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದರು.


ಬಾಕ್ಷ್ ಲೈನ್:

೧) ಇತ್ತೀಚಿಗೆ ಲವ್ ಜಿಹಾದ್ ಹೆಸರಲ್ಲಿ ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳು ಹೇಳತೀರದು. ಸಹೋದರಿ ನೇಹಾ ಅವರ ಅಮಾನುಷ ಹತ್ಯೆ ಖಂಡನೀಯ, ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ನ್ಯಾಯಾಲಯ ತ್ವರಿತವಾಗಿ ಜಗತ್ತೇ ನಿಬ್ಬೆರಗಾಗುವಂತ ಶಿಕ್ಷೆ ವಿಧಿಸಬೇಕು.

“ಸಂಗಮೇಶ ಹಿರೇಮಠ” ಜಂಗಮ ಸಮಾಜದ ಮುಖಂಡ ಮುಗಳಖೋಡ.

2) ಕು. ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಮುಗಳಖೋಡ ಪಟ್ಟಣದ ವಿವಿಧ ಸಂಘಟನಾಕಾರರು ಸಲ್ಲಿಸಿರುವ ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗುವುದು.

“ರೇಣುಕಾ ದೇಸಾಯಿ” ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ.

ಈ ಸಂದರ್ಭದಲ್ಲಿ ಮುಪ್ಪಯ್ಯ ಹಿರೇಮಠ, ಡಾ.ಸಿ.ಬಿ.ಕುಲಿಗೋಡ,  ಸುರೇಶ್ ಹೊಸಪೇಟಿ, ರಮೇಶ್ ಯಡವನ್ನವರ್, ಗೌಡಪ್ಪ ಖೇತಗೌಡರ, ಭೀಮಶಿ ಬನಶಂಕರಿ, ಗೋಪಾಲ್ ಯಡವನ್ನವರ್, ಶ್ರೀಪಾಲ್ ಕುರುಬಳ್ಳಿ, ರಾಜಶೇಖರ್ ನಾಯಕ್, ಮಹಾಂತೇಶ್ ಯರಡತ್ತಿ, ಶ್ರೀಮತಿ ಲತಾ ಹುದ್ದಾರ, ನಾಗಪ್ಪ ಹುಕ್ಕೇರಿ, ಆನಂದ್ ಯರಡತ್ತಿ, ಸಂಗಯ್ಯ ಹಿರೇಮಠ, ಸಿದ್ದಮಲ್ಲಯ್ಯಾ ಮಠಪತಿ, ಸಿದ್ದಯ್ಯ ಕರಡಿ, ಸೋಮಯ್ಯ ಹಿರೇಮಠ, ಹನುಮಸಾಬ್ ನಾಯಕ್, ಶ್ರೀಶೈಲ್ ಶೇಗುಣಸಿಮಠ, ಪರಗೌಡ ಖೇತಗೌಡರ, ಶಿವಯ್ಯ ಮಠಪತಿ, ಗಣೇಶ್ ಮಠಪತಿ, ಮಲ್ಲಿಕಾರ್ಜುನ ಮಠಪತಿ, ಶಿವಪ್ಪ ಹಳ್ಳುರ, ವಿಠ್ಠಲ್ ಯಡವನ್ನವರ, ಸಿದ್ರಾಮಯ್ಯ ಮಠಪತಿ, ರಮೇಶ ಕಲ್ಲಾರ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!