ಮುಗಳಖೋಡ:ಹೈಟೆಕ್ ಶೌಚಾಲಯ ಕಾಮಗಾರಿಗೆ ಮರುಚಾಲನೆ

Share the Post Now

ವರದಿ: ರಾಜಶೇಖರ ಶೇಗುಣಸಿ

ಮುಗಳಖೋಡ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶನಿವಾರ ಪುರಸಭೆ ಮರು ಚಾಲನೆ ನೀಡಿದೆ. ಸನ್ 2022-23ನೇ ಸಾಲಿನ ಎಸ್.ಎಫ್.ಸಿ. ಅನುದಾನದ 15 ಲಕ್ಷ ಮೊತ್ತದ ಕಾಮಗಾರಿ ಇದಾಗಿದೆ.
ಈ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯಾಗಿ ತಿಂಗಳುಗಳೆ ಕಳೆದಿತ್ತು, ಆದರೆ ಇದೀಗ ನೆನೆಗುದಿಗೆ ಬಿದ್ದಿದ್ದ ಶೌಚಾಲಯ ಕಾಮಗಾರಿಯನ್ನು ಪುರಸಭೆ ಪುನಃ ಪ್ರಾರಂಭ ಮಾಡಿದೆ. ದಿನವೂ ಸಾವಿರಾರು ಜನಸಾಮಾನ್ಯರು ಸಂಚರಿಸುವ ಈ ಪುಣ್ಯಕ್ಷೇತ್ರದ ಬಸ್ ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಜನ ಪರದಾಡುತ್ತಿದ್ದರು. ಆದರೆ ಇವತ್ತು ಈ ಕಾಮಗಾರಿಯ ಪ್ರಗತಿ ಕಂಡು ಎಲ್ಲರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಮೇಶ ಯಡವಣ್ಣವರ, ಪರಪ್ಪ ಖೇತಗೌಡರ, ಮಹಾವೀರ ಕುರಾಡೆ, ಮಹಾಂತೇಶ ಯರಡೆತ್ತಿ, ರಾಜು ನಾಯಿಕ, ಮುಖಂಡರಾದ ಗೋಪಾಲ ಯಡವಣ್ಣವರ, ಪರಶುರಾಮ ಯರಡೆತ್ತಿ, ಪುರಸಭೆ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು.

Leave a Comment

Your email address will not be published. Required fields are marked *

error: Content is protected !!