ಮುಗಳಖೋಡ: ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯರ್ಪಣೆ!

Share the Post Now

ವರದಿ: ರಾಜಶೇಖರ ಶೇಗುಣಸಿ


ಮುಗಳಖೋಡದಲ್ಲಿ ವಿಜೃಂಭಣೆಯಿಂದ ಐದೇಶಿ ಉತ್ಸವ, ಮಹಾ ಮಂಗಳಾರತಿ.

ಮುಗಳಖೋಡ: ಶ್ರೀಶೈಲ ಮಲ್ಲಿಕಾರ್ಜುನ ಕಂಬಿಯ  ಐದೇಶಿ ಉತ್ಸವ ಮುಗಳಖೋಡದಲ್ಲಿ ಸೋಮವಾರ ಮತ್ತು ಮಂಗಳವಾರ ವಿಜೃಂಭಣೆಯಿಂದ ಜರುಗಿತು..

ಪಟ್ಟಣದ ಭಕ್ತರು ಮಹಿಳೆಯರು ಆರತಿ ಸಮೇತ ಮಲ್ಲಿಕಾರ್ಜುನ ಮತ್ತು ಬಸವೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಐದೇಶಿ ನಿಮಿತ್ಯ ದೇವಸ್ಥಾನವನ್ನು ತೋರಣ, ದೀಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ನಂದಿಕೋಲು, ಕಂಬಿಯನ್ನು ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇಟ್ಟು ಪಟ್ಟಣದ ಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ಬೆಲ್ಲ ನೆಣಗಡಲೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಆಗಮಿಸಿದ ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡು ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು ವಸ್ತ್ರಗಳ ಕಾಣಿಕೆ ನೀಡಿದರು. ಸ್ವಾಮೀಜಿಗಳು ಮಲ್ಲಯ್ಯಾ ಮಲ್ಲಯ್ಯಾ, ಶಿರಿ ಗಿರಿ ಮಲ್ಲಯ್ಯ ಹಾಗೂ ಪಂಚಾದಾರಿಗೆ ಮಂಗಲ, ಪಲ್ಲಾಧಾರಿಗೆ ಮಂಗಲ ಎಂಬ ದೇವರ ಬಿರುದಾವಳಿ ಘೋಷಣೆಯೊಂದಿಗೆ ಮಂಗಳಾರತಿ ಮಾಡಿದರು. ಪುರವಂತರು ವೀರಭದ್ರನ ಒಡಬುಗಳನ್ನು ಹೇಳಿದರು.
ಎಲ್ಲ ಭಕ್ತರು ಭಕ್ತಿ ಪರವಶರಾಗಿ ಐದೇಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಂಬಳ ವಾದನ ಮತ್ತು ಕರಡಿಮಜಲುದವರು ತಮ್ಮ ಸೇವೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಿರೇಮಠ, ಅಶೋಕ ಹಿರೇಮಠ, ನೀಲಕಂಠಯ್ಯಾ ಹಿರೇಮಠ, ಮುರಘಯ್ಯಾ ಹಿರೇಮಠ, ಶ್ರೀಶೈಲ ಹಿರೇಮಠ, ರೇವಣಸಿದ್ದಯ್ಯಾ ಮಠಪತಿ, ಷಡಕ್ಷರಿ ಗವಿಮಠ, ಚಿಕ್ಕಯ್ಯಾ ಮಠಪತಿ, ಬಸಯ್ಯಾ ಗವಿಮಠ, ಸಿದ್ದಯ್ಯಾ ಕರಡಿ, ಬಸನಿಂಗಯ್ಯಾ ಹಿಡಕಲ್, ಅಶೋಕ ಯಡವಣ್ಣವರ, ಸಂಗಪ್ಪ ಹೊಸಪೇಟೆ, ಸಿದ್ದಣ್ಣ ಹೊಸಪೇಟೆ, ಯಲ್ಲಾಲಿಂಗ ಖೇತಗೌಡರ, ರವಿ ಖೇತಗೌಡರ, ರಮೇಶ ಯಡವಣ್ಣವರ, ಮಾರುತಿ ಹೂಗಾರ ಸೇರಿದಂತೆ ಅಪಾರ ಭಕ್ತ ಸಮೂಹದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!