ಹೋರಾಟಗಾರರ ಮೇಲೆ ಹಲ್ಲೆ ಮಾಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ : ಶಸಿಕಾಂತ ಪಡಸಲಗಿ ಶ್ರೀಗಳು
ಮುಗಳಖೋಡ : ಪಂಚಮಸಾಲಿ ಹಕ್ಕೊತ್ತಾಯಕ್ಕಾಗಿ ಶಾಂತಿಯುತ ಹೋರಾಟ ನಡೆದಾಗ ನಮ್ಮವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಹಲ್ಲೆ ಮಾಡದ ಅಧಿಕಾರಿಗಳನ್ನು ಈ ಕೂಡಲೆ ಸೇವೆಯುಂದ ಅಮಾನತು ಮಾಡಬೇಕು ಎಂದು ಶಶಿಕಾಂತ ಪಡಸಲಗಿ ಶ್ರೀಗಳು ಹೇಳುದರು.
ಅವರು ಪಟ್ಟಣದ ಮಹಾದ್ವಾರದಲ್ಲಿ ಡಿ.12 ಗುರುವಾರದಂದು ಕೂಡಲಸಂಗಮ ಪ್ರಥಮ ಜಗದ್ಗುರು ಜಯ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ 2ಎ ಹಾಗೂ ಲಿಂಗಾಯತ್ ಓಬಿಸಿ ಮೀಸಲಾತಿ ಚಳುವಳಿಯ ಸಂದರ್ಭದಲ್ಲಿ ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಹೋರಾಟಗಾರರ ಮೇಲೆ ನಡೆದ ಮಾರನಾಂತಿಕ ಹಲ್ಲೆ ಖಂಡಿಸಿ ಮಾತನಾಡುತ್ತಾ ನಾವು ಮಿಸಲಾತಿ ಹಕ್ಕಿಗಾಗಿ ಶ್ರೀಗಳ ಹಾಗೂ ಪಕ್ಷಾತೀತವಾಗಿ ಎಲ್ಲ ಮುಖಂಡರ ಮುಂದಾಳತ್ವದಲ್ಲಿ ಸಮಾಜದ ಎಲ್ಲರೂ ಹೊರಾಟಕ್ಕಿಳಿದಿದ್ದೇವೆ. ನಮಗೆ ಸಿಗಬೇಕಾದ ಮಿಸಲಾತಿ ಕೊಡುವವರೆಗೆ ಹೊರಾಟ ನಿರಂತರ ಎಂದು ಹೇಳಿದರು,
ಬಳಿಕ ಹಕ್ಕೊತ್ತಾಯದ ಮನವಿಯನ್ನು ರಾಜ್ಯಪಾಲರಿಗೆ ಗ್ರಾಮ ಆಡಳಿತಾಧಿಕಾರಿ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ ಹೊಸಪೇಟಿ, ಗೌಡಪ್ಪ ಖೆತಗೌಡರ, ಅಶೋಕ ಕೊಪ್ಪದ, ಪುರಸಭೆ ಸದಸ್ಯರಾದ ಪರಪ್ಪ ಖೆತಗೌಡರ, ಮಹಾಂತೇಶ ಯರಡೆತ್ತಿ, ಚೇತನ ಯಡವಣ್ಣವರ,ಅಗ್ರಾಣಿ ಶೇಗುಣಸಿ, ಸುರೇಶ ಜಂಬಗಿ, ಸದಾಶಿವ ಜಂಬಗಿ,ಡಾ.ಶಂಕರ ಕೊಪ್ಪದ,ನಾಗಪ್ಪ ಹುಕ್ಕೇರಿ, ಭೀಮಪ್ಪ ಖೆತಗೌಡರ, ಪ್ರಕಾಶ ಮಗದುಮ್ಮ, ಶಿವಲಿಂಗ ಯರಡೆತ್ತಿ, ಶ್ರೀಕಾಂತ ಪಾಟೀಲ, ರಾಮನಗೌಡ ಪಾಟೀಲ,ಮಾಧು ಮಗದುಮ್ಮ, ಬಸಪ್ಪ ಹಾಲಳ್ಳಿ, ಭೀಮು ಕೊಪ್ಪದ ,ಸಂಗಪ್ಪ ಬಾಳೋಜಿ ,ಭೀಮು ಆಸಂಗಿ ,ಸದಾಶಿವ ಬಡಿಗೇರ, ಅಪ್ಪಸಾಹೇಬ್ ಎರಡೆತ್ತಿ ,ಶಿವಾನಂದ ಜಂಬಗಿ ಹಾಗೂ ಸಮಾಜದ ಮುಂಖಡರು ಇದ್ದರು.
ಸುಮಾರು ಎರಡು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಬಂದ ಮಾಡಲಾಗಿತ್ತು. ಹಾರೂಗೇರಿ ಪೋಲಿಸ್ ಠಾಣಾ ಪಿಎಸ್ಐ ಮಾಳಪ್ಪ ಪೂಜಾರಿ ಸಿಬ್ಬಂದಿಗಳೊಂದಿಗೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.
ವರದಿ: ಸಂತೋಷ ಮುಗಳಿ