ಬೆಳಗಾವಿ.ರಾಯಬಾಗ: ಇತ್ತೀಚೆಗೆ ಚಿಕ್ಕೋಡಿ ತಾಲ್ಲೂಕು ಹಿರೆಕೋಡಿಯ ನಂದಿ ಪರ್ವತ ಆಶ್ರಮದ ಪ.ಪೂ.108 ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯು ತೀವ್ರ ಖಂಡನೀಯ. ಸಮಾಜದಲ್ಲಿ ಶಾಂತಿ ಸಹನೆ,ಸತ್ಯ ದಯೆ, ಧರ್ಮ,ಸಹಬಾಳ್ವೆ,ಕರುಣೆ ಯಂತಹ ಮಾನವೀಯ ಮೌಲ್ಯಗಳನ್ನು ಬಿತ್ತಿ ಲೋಕದ ಒಳಿತಿಗಾಗಿ ಹಗಲಿರುಳು ದೇಹ ಸವೆಸುತ್ತಿದ್ದ ಮುನಿಗಳ ಹತ್ಯೆ ನಿಜಕ್ಕೂ ಈ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಭಕ್ತರ ಸಹಸ್ರಾರು ಶ್ರಾವಕ ಶ್ರಾವಕಿಯರಿಗೆ ರಕ್ಷಾಕವಚವಾಗಿದ್ದ ಕಾಮಕುಮಾರ ನಂದಿ ಮಹಾರಾಜರ ಸಕಲ ಮನುಕುಲದ ಲೇಸನ್ನೇ ಬಯಸುತ್ತಿದ್ದರು. ಇಂಥಹ ಮುನಿಗಳನ್ನು ಆರೋಪಿಗಳು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿರುವುದು ಅತ್ಯಂತ ಶೋಚನೀಯ ಸಂಗತಿ.ಈ ಪೈಶಾಚಿಕ ಕೃತ್ಯ ಎಸಗಿದ ಆರೋಪಿಗಳಿಗೆ ಸರ್ಕಾರ ಪಕ್ಷಾತೀತವಾಗಿ ಈ ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಲೋಕದ ಹಿತ ಚಿಂತನೆ ಬಯಸುವ ನಾಡಿನ ಎಲ್ಲ ಸಾಧು, ಸಂತ, ಸದ್ಗುರು ಮುನಿಗಳಿಗೆ ಸುರಕ್ಷತೆ ನೀಡಬೇಕು.
ಹಾಗೂ ಭವಿಷ್ಯದಲ್ಲಿ ಇಂತಹ ಕೆಟ್ಟ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ರಾಯಬಾಗ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಡಾ.ಜಯವೀರ ಎ.ಕೆ., ಮ. ಸಾ.ಪ.ಅಧ್ಯಕ್ಷ ಶ್ರೀ ಅಮರ ಕಾಂಬಳೆ, ಕ.ಸಾ.ಪ.ಅಧ್ಯಕ್ಷ ಆರ್.ಎಂ.ಪಾಟೀಲ, ತಾಲ್ಲೂಕು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಎಸ್.ವಂಟಗೂಡಿ,ಹಾಗೂ ತಾಲ್ಲೂಕಿನ ಎಲ್ಲ ಜೈನ ಬಾಂಧವರು ಸರಕಾರವನ್ನು ಆಗ್ರಹಿಸಿದ್ದಾರೆ.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ





