ಮೂಡಲಗಿ.
ಹಳ್ಳೂರ.
ಸಾವಿತ್ರಿ ಬಾಯಿ ಪುಲೆ ಅವರು ಭಾರತ ದ ಮೊದಲ ಮಹಿಳಾ ಶಿಕ್ಷಕಿಯ 193 ನೇ ಜನ್ಮ ದಿನವಿದು. ಶಿಕ್ಷಣವೆಂದರೆ ತಿಳಿಯದ ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲನೆಯವರು ಮಾತೆ ಸಾವಿತ್ರಿ ಬಾಯಿ ಪುಲೆ ಎಂದು ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಗ್ರಾಮದ ಶ್ರೀ ಸಾವಿತ್ರಿ ಬಾಯಿ ಪುಲೆ ಅವರ ವೃತ್ತದಲ್ಲಿ ಸಾವಿತ್ರಿ ಬಾಯಿ ಪುಲೆ ಜಯಂತೋತ್ಸವ ಆಚರಣೆಯಲ್ಲಿ ಮಾತನಾಡಿ
ಒಬ್ಬ ಶಿಕ್ಷಕಿ ಹೋರಾಟಗಾರ್ತಿ ದಣಿವರಿಯದ ಸತ್ಯ ಶೋಧಕಿ ಆಧುನಿಕ ಕಾಲದ ಶಿಕ್ಷಣದ ತಾಯಿ ಸರಳತೆಯ ಸಾಕಾರ ಮೂರ್ತಿ , ಖಾದಿ ಸೀರೆಯನ್ನುಟ್ಟು ಸರಳತೆಯನ್ನು ಹಿಡಿದ ಕನ್ನಡಿಯಾಗಿದೆ ಸಾವಿತ್ರಿ ಬಾಯಿ ಪುಲೆ ಎಂದು
ಹೇಳಿದರು.
ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಗ್ರಾಂ ಪ ಕಾರ್ಯದರ್ಶಿ ಶಿವಾನಂದ ಸಂಪಗಾರ.ಮುಖಂಡರಾದ ಸಿದ್ಧಪ್ಪ ಕೂಲಿಗೊಡ. ಮಾದೇವ ಹೊಸಟ್ಟಿ. ಕುಮಾರ ಲೋಕನ್ನವರ. ಸುರೇಶ ಕತ್ತಿ. ರಾಮಣ್ಣ ನಿಡೋಣಿ. ಶಂಕರಯ್ಯ ಹಿರೇಮಠ.ದುಂಡಪ್ಪ ಕತ್ತಿ. ಕಿಶೋರ ಗಣಾಚಾರಿ. ಚರಣ ನಾಶಿ. ರಮೇಶ ದುರದುಂಡಿ. ಅಪ್ಪಾಸಾಬ ಮುಜಾವರ. ಅಶೋಕ ತೇರದಾಳ. ಶ್ರೀಶೈಲ ಲೋಕನ್ನವರ. ಲಕ್ಷ್ಮಣ ಕೌಜಲಗಿ. ಮಹಾಂತೇಶ ಲಿಗಾಡಿ.





