ಮುರಿಗೆಪ್ಪ ಮಾಲಗಾರ ಅವರಿಗೆ ಮಂಗಳ ಸುರೇಶ ಅಂಗಡಿಯವರಿಂದ ಸತ್ಕಾರ!

Share the Post Now

ಬೆಳಗಾವಿ.

ರಾಜ್ಯ ಸರ್ಕಾರವು ರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಮಾಜ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಘಣನೆಗೆ ತಗೆದುಕೊಂಡು ನೀಡಲಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಬೆಳಗಾವಿ ಲೋಕಸಭಾ ಸದಸ್ಯರ ಗೃಹ ಕಚೇರಿಯಲ್ಲಿ ಶ್ರೀಮತಿ ಮಂಗಳ ಸುರೇಶ ಅಂಗಡಿ ಅವರು ಸತ್ಕರಿಸಿ ಶುಭ ಕೋರಿದರು. ಸನ್ಮಾನ ನೇರವೇರಿಸಿ ಸಂಸದರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಸಮಾಜ ಸೇವೆಯನ್ನು ಮಾಡಿ ಸಮಾಜಕ್ಕೆ ಗುರುತಿಸಿಕೊಂಡ ನಿಮ್ಮ ಸಮಾಜ ಸೇವೆ ಇನ್ನೂ ಹೆಚ್ಚಾಗಲಿ ನೀವು ಉತ್ತರೋತ್ತರವಾಗಿ ಬೆಳೆದು ಮೇಧಾವಿಗಳಾಗಿರಿ ಈಗಿನ ಕಾಲದಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ಜೀವನ ಮೊಟಕುಗೋಳಿಸುತ್ತಿದ್ದಾರೆ ಅಂತಹದರಲ್ಲಿ ನೀವೂ ಮಾಡುವ ಕೆಲಸ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ವತಿಯಿಂದ ಸಂಸದರಾದ ಮಂಗಳ ಸುರೇಶ ಅಂಗಡಿ ಅವರನ್ನು ಸತ್ಕರಿಸಿದರು. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾದ ವಿದ್ಯಾವತಿ ಬಜೆಂತ್ರಿ ಅವರನ್ನು ಕಚೇರಿಯಲ್ಲಿ ಸನ್ಮಾನಿಸಲಾಯಿತು.ಈ ಸಮಯದಲ್ಲಿ ಸಂಸದರ ಆಪ್ತ ಸಹಾಯಕ ಆರ ಎಂ ಜೋಶಿ.ಸಂತೋಷ ಕಟ್ಟಿ.ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಅಧ್ಯಕ್ಷೆ ಬಂದವ್ವ ಕಾಗೆ. ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ.ಕಾರ್ಯದರ್ಶಿ ಶೃತಿ ಕೂಲಿಗೊಡ. ಅಂಬವ್ವಾ ಗೊಸಬಾಳ. ನೀಲವ್ವ ಕುಂದರಗಿ. ಶಾಂತವ್ವ ಲಕ್ಷ್ಮೇಶ್ವರ. ಸಾವಂಕ್ಕ ಕೂಲಿಗೊಡ. ಭಾರತಿ ನಿಡೋಣಿ. ಸುಜಾತಾ ಕೂಲಿಗೊಡ. ಮಾನಂದಾ ಅಥಣಿ. ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!