ಸಮೀರವಾಡಿ . ಗೋದಾವರಿ ಬೈಯೋರೀಪೈನರಿಜ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಸಹಸ್ರಾರು ಬಡ ಕುಟುಂಬದವರಿಗೆ ಸಹಾಯ ಸಹಕಾರ ನೀಡಿ ನಿರಂತರ ಸಮಾಜ ಸೇವೆ ಮಾಡುತ್ತಿರುವ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಇತ್ತೀಚಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಅವರು ಪ್ರಾಮಾಣಿಕ ನಿಷ್ಠೆಯಿಂದ ಮಾಡಿದ ಸೇವೆಗೆ ತಕ್ಕ ಪಲ ದೊರೆತಿದೆ ಎಂದು ಕಾರ್ಮಿಕರ ಮುಖಂಡ ರವಿ ಕುರಬರ ಹೇಳಿದರು.
ಅವರು ಸಮೀರವಾಡಿ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕ್ಕೊಂಡ ಸನ್ಮಾನ ಕಾರ್ಯಕ್ರಮದ ಅದ್ಯಕ್ಷರಾಗಿ ಮಾತನಾಡಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಸಹಸ್ರಾರು ಬಡ ಕುಟುಂಬದವರ ಮನ ಗೆದ್ದು ಬೆಳಗಾವಿ, ಬಾಗಲಕೋಟ ಜಿಲ್ಲೆಯ ಜನರ ಪ್ರೀತಿಗೆ ಪಾತ್ರರಾಗಿ ಹೆಮ್ಮೆಯ ಯುವ ನಾಯಕನಾಗಿ ನೊಂದ ಬೆಂದವರ ಬಾಳಿಗೆ ಬೆಳಕಾಗಿ ನಿಂತಿರುವ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಈಗಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.ಸಮಾಜದ ಉತ್ತಮ ಪ್ರಜೆಯಾಗಿ ಹೊರ ಹೊಮ್ಮುತ್ತಿದ್ದಾರೆ.
ಎಂದು ಹೇಳಿದರು. ಸೋಮಯ್ಯ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸೊಸೈಟಿಯ ಅಧ್ಯಕ್ಷರಾದ ಮನೋಹರ ಬಡಿವಾಳ ಮಾತನಾಡಿ ಈಗಿನ ಕಾಲದಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನ ಸಾಗಿಸುವುದು ಕಷ್ಟ ಕರ ಅಂತಹದರಲ್ಲಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತ, ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಸಮಾಜ ಸೇವೆ ಮಾಡುತ್ತಿರುವ ಮಾಡುತ್ತಿರುವ ಮುರಿಗೆಪ್ಪ ಮಾಲಗಾರ ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಬದಲ್ಲಿ ಮಜದೂರ ಯುನಿಯನ್ ಪದಾಧಿಕಾರಿ ಬಸವರಾಜ್ ಮೇಲಪ್ಪಗೊಳ. ಸೋಮೈಯ ಸಕ್ಕರೆ ಕಾರ್ಖಾನೆಯ ಸೊಸೈಟಿಯ ಉಪಾಧ್ಯಕ್ಷ ಪಕೀರಪ್ಪ ವಗ್ಗರ.ಆಯ್ ಎಂ ನದಾಫ. ಶಂಭುಲಿಂಗಯ್ಶ ಮಠಪತಿ.ಆರ್ ಕೆ ನದಾಫ.ಈಶ್ವರ ಕುಲ್ಲೊಳ್ಳಿ. ಆರ್ ಡಿ ಪೂಜಾರಿ. ಆಲಿಮ ಅರಬ. ರವಿರಾಜ ಕಂಬಾರ. ಪ್ರಕಾಶ ಬನಹಟ್ಟಿ. ನಿಂಗಪ್ಪ ಮುದ್ದಾಪುರ. ಸಲಿಮ ಅಲಾಸೆ. ಜಗದೀಶ ಕಮಲಾಕರ. ಶ್ರೀನಿವಾಸ ನಿಡೋಣಿ. ಅಬ್ದುಲ ಮುಜಾವರ. ಜ್ಯೋತಿಬಾ ಜಾಧವ. ಬಸು ತೇಲಿ. ವಿಠ್ಠಲ ಬನಹಟ್ಟಿ. ಬಸು ಪೂಜಾರಿ. ಅಪ್ಪು ನಂದಗೌಡರ. ಸೇರಿದಂತೆ ಯುನಿಯನ್ ಪದಾಧಿಕಾರಿಗಳು ಸೊಸೈಟಿಯ ಸದಸ್ಯರು ಹಾಗೂ ಕಾರ್ಮಿಕ ಬಂದುಗಳಿದ್ದರು.