ಹಳ್ಳೂರ .ಹಗಲಿರುಳು ಸಮಾಜ ಸೇವೆ ಮಾಡುತ್ತ ಬಡ ಕುಟುಂಬಗಳ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಮಾಡುತ್ತಾ ಅವರಿಗೆ ದೊರೆಯಬೇಕಾದ ಸರಕಾರಿ ಸೌಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಹಸ್ರಾರು ಬಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಹಾಗೂ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ, ಮಾಧ್ಯಮ ಕ್ಷೇತ್ರದಲ್ಲಿಪ್ರಾಮಾಣಿಕ ಸೇವೆ ಮಾಡುತ್ತಿರುವ ಹಳ್ಳೂರ ಗ್ರಾಮದ ಶ್ರೀ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ನೋಡಿದರೆ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಶಿವಲಿಂಗೇಶ್ವರ ಹಾಗೂ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಲಿಂಗ ನಿಂಗನೂರ ಸರ ಹೇಳಿದರು.
ಸಮೀಪದ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಹಾಗೂ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನ ನೇರವೇರಿಸಿ.ಮಾತನಾಡಿ ಸ್ವಾರ್ಥಿಗಳು ಸಮಾಜದಲ್ಲಿ ಹೆಚ್ಚಾಗಿದ್ದಾರೆ ಅಂತಹದರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.ಎಲ್ಲರ ಜೊತೆ ಒಳ್ಳೆಯ ಒಡನಾಟ ಪಡೆದಿದ್ದಕ್ಕಾಗಿ ಸನ್ಮಾನದ ಸುರಿಮಳೆ ಆಗುತ್ತಿವೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಮಾಜದಲ್ಲಿ ಗುರುತಿಸಿಕೊಂಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಮೆಚ್ಚುವಂತಹದ್ದು ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ಹೊರ ಹೊಮ್ಮುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಸನ್ಮಾನ ಸ್ವೀಕರಿಸಿ ಮಾತನಾಡಿ , ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ ಜನಸೇವೆಯಾಗಿದೆ ನನ್ನಿಂದ ಬಡ ಜನರಿಗೆ ಸಹಕಾರ ನೀಡಬೇಕು ಅನ್ನುವ ಮನೋಭಾವನೆವಿಟ್ಟು ಕ್ಕೊಂಡು ಸಮಾಜಕ್ಕೆ ಕೊಡುಗೆ ನೀಡಲು ಇದೊಂದು ಸುವರ್ಣಾವಕಾಶವಿದು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದ ನನಗೆ ಸಂತೋಷದಾಯಕ ಹಾಗೂ ಇನ್ನಷ್ಟು ಸಮಾಜ ಸೇವೇ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದು ಹೇಳಿದರು .ಈ ಸಂದರ್ಬದಲ್ಲಿ ರಾಮಸ್ವಾಮಿ ಕೊಲಕಾರ. ಕುಮಾರ ರಡ್ಡೆರಟ್ಟಿ.ಇಮ್ರಾನ್ ಪಿರಾಜಾದೆ.ಆರ್ ಬಿ ಕರೋಶಿ.ಮಂಜುಳಾ ವಾಖೋಡೆ.ಶೀಭಾ ಸ್ವಾಮಿ.ಮನಿಷಾ ರಾಥೋರ್.ನೇಹಾ ಸಯ್ಯದ.ಸ್ಫೂರ್ತಿ ಕೌಜಲಗಿ.ವಿಜಯಲಕ್ಷ್ಮಿ ಲಂಗೋಟಿ.ಸಲ್ಮಾ ನಾಲಬಂದ.ಲಕ್ಷ್ಮೀ ರಡ್ಡೆರಟ್ಟಿ.ಭಾರತಿ ಖಾನಾಪುರ.ವಿದ್ಯಾಶ್ರೀ ಅಮೋಜಗೋಳ.ಸವಿತಾ ಬೈಲವಾಡ ಸೇರಿದಂತೆ ಶಿಕ್ಷಕರು ಗುರು ಮಾತೆಯರು ವಿದ್ಯಾರ್ಥಿಗಳಿದ್ದರು.ಪ್ರಾರಂಭದಲ್ಲಿ ಸನ್ಮಾನ ನೇರವೇರಿಸಿ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.