ಹಳ್ಳೂರ .
ಬಡವ ದಿನ ದಲಿತರ ಬಾಳಿಗೆ ಬೆಳಕಾಗಿ ಬೇರೊಬ್ಬರ ಕಷ್ಟದಲ್ಲಿ ಬಾಗೀಯಾಗಿ ಸಮಾಜ ಸೇವೆ ದೇವರ ಸೇವೆಯೆಂದು ತಿಳಿದು ಒಳ್ಳೆಯ ಕೆಲಸ ಕಾರ್ಯ ಮಾಡುತ್ತಾ ಮೇಲು ಕೀಳೆಂಬ ಭಾವನೇವಿಲ್ಲದೆ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಶಿವಶಂಕರ ನಗರದ ಯುವಮುಖಂಡ ಬಾಳಪ್ಪ ಬಾಗೋಡಿ ಹೇಳಿದರು.ಗ್ರಾಮದ ಶಿವಶಂಕರ ನಗರದ ಬಾಗೋಡಿ ಅವರ ಮನೆಯಲ್ಲಿ ಕರ್ಣಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಅವರಿಗೆ ಸನ್ಮಾನ ನೇರವೇರಿಸಿ ಮಾತನಾಡಿ ಅತೀ ಚಿಕ್ಕ ವಯಸ್ಸಿನಲ್ಲಿ ಸಾಮಾಜಿಕ ಕಾರ್ಯ ಮಾಡಿ ಯಾರ ಸಹಕಾರವಿಲ್ಲದೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿಗೆ ಬಾಜಿನರಾಗಿದ್ದು ಹೆಮ್ಮೆಯ ಸಂಗತಿ. ಸಾಧನೆಗೆ ಇತಿ ಮಿತಿ ಇನ್ಯಾವುದೂ ಸಂಬಂಧ ಪಡುವುದಿಲ್ಲ ಏನಾದರೂ ಸಮಾಜಕ್ಕೆ ನೀಡಬೇಕೆನ್ನುವ ಒಳ್ಳೆಯ ಮನಸ್ಸು ಒಂದಿದ್ದರೆ ಸಾಕು ಒಳ್ಳೆದು ಮಾಡೋರಿಗೆ ಉನ್ನತ ಸ್ಥಾನ ಮಾನ ಪುರಸ್ಕಾರ ಸನ್ಮಾನ ಸಿಕ್ಕೆ ಸಿಗುತ್ತದೆ. ಈಗಿನ ಯುವ ಜನಾಂಗದವರಿಗೆ ಮಾದರಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದರು. ಈ ಸಮಯದಲ್ಲಿ ಶಿವಪ್ಪ ಲೋಕಣ್ಣವರ.ಸಂತೋಷ ಬಾಗೊಡಿ. ಶ್ರೀಶೈಲ ಲೋಕನ್ನವರ.ಶ್ರೀಕಾಂತ ಪಟ್ಟಣಶೆಟ್ಟಿ. ಸಂತೋಷ ಬಾಗೊಡಿ ಸೇರಿದಂತೆ ಹಲವರಿದ್ದರು.