ಹಳ್ಳೂರ.
ಬಡವ ದಿನ ದಲಿತರ ಮನೆ ಮನೆಗೆ ಹೋಗಿ ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ನಿರಂತರ ಸಮಾಜ ಸೇವೆ ಮಾಡಿ ಜಾತಿ ಬೇಧ ಭಾವ ಮಾಡದೆ ಎಲ್ಲರೂ ಒಂದೇ ಎಂಬ ಬಾವನೆ ಇಟ್ಟುಕ್ಕೊಂಡು ಸಾಕಷ್ಟು ಜನರಿಗೆ ಸಹಾಯ ಸಹಕಾರ ಮಾಡಿ ಯಾವುದೆ ಆಮಿಷಕ್ಕೆ ಒಳಗಾಗದೆ ನಿಸ್ವಾರ್ಥ ಸೇವೆಯಿಂದ ನಿಷ್ಠೆಯಿಂದ ಸಮಾಜದ ಕೆಲಸ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಒಂದು ಕೊಡುಗೆಯನ್ನು ನೀಡುತ್ತಿರುವ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಈಗಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆಂದು ಯುವ ಮುಖಂಡ ಭೀಮಪ್ಪ ಡಬ್ಬನ್ನವರ ಹೇಳಿದರು.
ಅವರು ಗ್ರಾಮದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರ ಹುಟ್ಟು ಹಬ್ಬದ ಆಚರಣೆಯಲ್ಲಿ ಮಾತನಾಡಿ ತನ್ನ ಕೆಲಸ ಕಾರ್ಯ ಮಾಡುತ್ತಾ ಸಭೆ ಸಮಾರಂಭಗಳಲ್ಲಿ ಬಾಗವಹಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಸಾಕಷ್ಟು ಜನರ ಬಾಳಿಗೆ ಬೆಳಕಾಗಿ ನಿಂತಿದ್ದಾರೆ.ಯಾವುದೆ ಅದಿಕಾರವಿಲ್ಲದೆ ಇಸ್ಟೊಂದು ಸಮಾಜ ಸೇವೆ ಮಾಡುತ್ತಿರುವ ⁸ಮುರಿಗೆಪ್ಪ ಮಾಲಗಾರ ಅವರು ತಾಲೂಕಾ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಎಲ್ಲ ಸಮಾಜ ಬಾಂದವರ ಪೂರ್ಣ ಬೆಂಬಲ ನೀಡಿದರೆ ಗ್ರಾಮ ಹಾಗು ಸಮಾಜ ಸುಧಾರಣೆಗೆ ಹೆಚ್ಚು ಅನುಕೂಲವಾಗುವುದು ಸರಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ನೀಡಿದೆ ಇನ್ನು ಉನ್ನತ ಮಟ್ಟಕ್ಕೆರಲಿ ಎಂದು ಹೇಳಿದರು. ಯುವ ನಾಯಕ ಅಪ್ಪು ಸಿದ್ದಾಪೂರ ಮಾತನಾಡಿ ಹಣ ಕೊಟ್ಟು ಹೆಸರು ಗಳಿಸುವ ಈಗಿನ ಕಾಲದಲ್ಲಿ ಸಮಾಜ ಸೇವೆ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಗೆಳೆಯರ ಬಳಗದ ವತಿಯಿಂದ ಮುರಿಗೆಪ್ಪ ಮಾಲಗಾರ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗಜಾನನ ಡಬ್ಬನ್ನವರ ಗೋಪಾಲ ಹೊಸಟ್ಟಿ. ಸಿದಮಲ ನಿಡೋಣಿ. ಮಲ್ಲಯ್ಯ ಹಿರೇಮಠ. ಸಚಿನ ಹೊಸಟ್ಟಿ. ಸಂದೀಪ ನಾಯಕ. ಸುರೇಶ ನಿಡೋಣಿ.ನಿಜಗುನಾನಂದ ಸ್ವಾಮಿಗಳು. ನಾಗಪ್ಪ ಗೋಸಬಾಳ. ಸುನೀಲ ನಾಯಿಕ. ಮಲ್ಲು ಗರಗ. ಹನಮಂತ ಬಡಿಗೇರ.. ಮಹೇಶ ಮಠಪತಿ.ಮಲ್ಲಗೌಡ ನಾಯ್ಕ. ರಾಜು ಅಂಗಡಿ. ಬಾಳು ಕೇವಟಿ. ಯಲ್ಲಗೌಡ ಪಾಟಿಲ. ಈರಪ್ಪ ನಿಡೋಣಿ. ಅಜಿತ ನಾವಿ. ಹನಮಂತ ಸಿದ್ದಾಪೂರ. ನಾಗು ಹೊಸಟ್ಟಿ ಸೇರಿದಂತೆ ಅನೇಕರಿದ್ದರು.