ಹಳ್ಳೂರ ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಹಳ್ಳೂರ ಗ್ರಾಮದ ಶ್ರೀ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ನೋಡಿದರೆ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಪ್ರಧಾನ ಗುರುಗಳು ಏಸ್ ಎಚ ವಾಸನ ಹೇಳಿದರು.
ಸ ಹಿ ಪ್ರಾ ಶಾಲೆ ಹಳ್ಳೂರ ಶಾಲೆಯ ಆವರಣದಲ್ಲಿ ಶಾಲೆಯ ವತಿಯಿಂದ ಸನ್ಮಾನ ನೇರವೇರಿಸಿ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮುರಿಗೆಪ್ಪ ಮಾಲಗಾರ ಮಾತನಾಡಿದ ಅವರು, ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ ಜನಸೇವೆಯಾಗಿದೆ ಎಂದರು.
ಶಿಕ್ಷಕ ಪ್ರಕಾಶ ಮೋರೆ ಮಾತನಾಡಿ . ಈ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನಮ್ಮೂರಿನ ಮುರಿಗೆಪ್ಪ ಮಾಲಗಾರ ಅವರಿಗೆ ದೊರೆತಿದ್ದು ನಮಗೆ ನಮ್ಮೂರಿಗೆ ಹೆಮ್ಮೆಯ ಸಂಗತಿಯಾಗಿದೆ.ಎಲ್ಲರೊಡನೆ ಬೆರೆತು ಅಹಂಬಾವ ವಿಲ್ಲದೆ ಇನ್ನೊಬ್ಬರು ಕಷ್ಟಕ್ಕೆ ಸಹಾಯ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಂಡು ಬಂದಿದ್ದಾರೆ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆಂದು ಹೇಳಿದರು.
ಈ ಸಂದರ್ಬದಲ್ಲಿ . ಎಸ್ ಎಂ ಬೆಳ್ಳಕ್ಕಿ.ಗೋವಿಂದ ಮಾದರ. ಎಸ್ ಡಿ ನಾವಿ. ಎಸ್ ಡಿ ಚಿಪ್ಪಲಕಟ್ಟಿ. ಆರ್ ಜಿ ಕುರಣಿಂಗ. ಎಸ್ ಬಿ ಬಾಳಂಬೀಡ. ಸುನಂದಾ ಹಳ್ಳೊಳ್ಳಿ. ವಾಯ್ ಬಿ ಕಾಡಪ್ಪಗೊಳ. ಬಿ ಎಸ್ ಗುಣದಾಳ. ವಿ ಎಸ್ ಸಂತಿ. ಆರ್ ಎಸ್ ಮಗದುಮ. ರೂಪಶ್ರೀ ಜಂಗಮ. ಕವಿತಾ ಗೌಡವಾಡಿ. ಸುಜಾತಾ ಗೋಲಬಾಂವಿ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿದ್ದರು.