ಬೆಳಗಾವಿ
ವರದಿ:ಸಚಿನ್ ಕಾಂಬ್ಳೆ
ಅಥಣಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಉಳಿಸಬೇಕಾದರೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಅರಿವು ಅತ್ಯಗತ್ಯವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೊಗಿಲೆ ಹೇಳಿದರು.
ಅವರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಬಿಎಲ್ಒ ಗಳಾದ ಎಮ್.ಸಿ. ಉಳ್ಳಾಗಡ್ಡಿ ಶಿಕ್ಷಕರು ಮಾತನಾಡಿ, ಮತದಾರರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಪ್ರಜಾ ಪ್ರತಿನಿಧಿಗಳನ್ನ ಆಯ್ಕೆ ಮಾಡಿದರೆ ಮಾತ್ರ ದೇಶ,ಪಟ್ಟಣ ಹಾಗೂ ಗ್ರಾಮಗಳು ಉದ್ದಾರ ಆಗೋದಕ್ಕೆ ಸಾಧ್ಯವಿದೆ ಎಂದರು.ಮತದಾರರು ಮತವನ್ನು ಹಣ ಹೆಂಡಕ್ಕೆ ಮಾರಿಕೊಳ್ಳದೇ ಪ್ರಜ್ಞಾವಂತ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ ವಾಘಮೋರೆ,ಮುಖ್ಯೋಪಾಧ್ಯಾಯರಾದ ಎಲ್ ಎಚ್ ಮಾಳಿ,ಎಮ್ ಸಿ ಉಳ್ಳಾಗಡ್ಡಿ,ಸತೀಶ ನಾಯಕ,ಸಂತ್ರಾಮ ಕಾಂಬ್ಳೆ ಹಾಗೂ ಶಿಕ್ಷಕ,ಶಿಕ್ಷಕಿಯರು ಇದ್ದರು.