ಹಳ್ಳೂರ.
ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯವಾಗಿ ಗುರುವಾರ ಸಂಜೆ ಪ್ರಾರಂಭವಾಗಿ 9 ದಿನಗಳ ಕಾಲ ಶ್ರೀ ದೇವಿ ಪುರಾಣವನ್ನು ನಾಗರಾಳದ ಪರಮಾನಂದ ಯೋಗಾಶ್ರಮ ಮಠದ ಪೀಠಾಧಿಪತಿಗಳು ಹಾಗೂ ಪ್ರವಚನಕಾರರಾದ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳಿಂದ ನೆರವೇರುವುದು. ಪ್ರತೀ ದಿನ ಮುಂಜಾನೆ ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರುವುದು. ದಿನಾಲು ಸರ್ವರಿಗೂ ಮಾಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದ್ಯಾಮವ್ವ ದೇವಿ ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.