ವರದಿ: ರಾಜಶೇಖರ ಶೇಗುಣಸಿ.
ಮುಗಳಖೋಡ: ಪ್ರತಿದಿನ ಸಾವಿರಾರು ಜನ ಸೇರುವ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಬಸ್ ನಿಲ್ದಾಣದ ಒಳಗಡೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕುರಿತು ಪುರಸಭೆ ವತಿಯಿಂದ ಗೋಡೆ ಬರಹವಿದ್ದ ಜಾಹಿರಾತು ಚಿತ್ರಿಸಲಾಗಿದೆ.
ಈಗ ಲೋಕಸಭಾ ಚುನಾವಣೆ ನಿಮಿತ್ತ ನೀತಿಸಂಹಿತೆ ಜಾರಿಯಲ್ಲಿದ್ದರು, ಈ ನಿಲ್ದಾಣದ ಗೋಡೆಯ ಮೇಲೆ ಬಿಡಿಸಿದ ಜಾಹಿರಾತನ್ನು ಅಳಿಸದೆ ಯಾವುದೇ ಮರೆ ಮಾಡದೆ ಹಾಗೆ ಗೋಚರಿಸುತ್ತಿತ್ತು.
ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ನಿಲ್ದಾಣ ಇದಾಗಿದ್ದು ಪ್ರತಿದಿನ ಸಾವಿರಾರು ಜನರು ಈ ಭಾಗದಲ್ಲಿ ಸಂಚರಿಸಲು ಆಗಮಿಸುತ್ತಾರೆ. ಇಂತಹ ಸ್ಥಾನದಲ್ಲಿ ಪ್ರಧಾನ ಮಂತ್ರಿ ಯೋಜನೆಗಳನ್ನು ಕುರಿತು ಭಿತ್ತಿಚಿತ್ರಗಳನ್ನು ಬಿಡಿಸಲಾಗಿತ್ತು. ನೀತಿ ಸಂಹಿತೆ ಜಾರಿಯಾಗಿ ಹಲವಾರು ದಿನಗಳೇ ಕಳೆದರೂ ಮುಗಳಖೋಡ ಪುರಸಭೆಗೆ ಇದು ಕಾಣಲಿಲ್ಲ. ಇದರಿಂದ ಮುಗಳಖೋಡ ಪುರಸಭೆಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
(ಸಿವಿಜಿಲ್) ಸೆಂಟ್ರಲ್ ಕಛೇರಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ಟಿ.ಎಚ್.ಕಟ್ಟಿಮಣಿ ಅವರ ತಂಡ ಬುಧವಾರ ರಾತ್ರಿ 11-30 ಕ್ಕೆ ಸ್ಥಳಕ್ಕೆ ದೌಡಾಯಿಸಿ ಜಾಹಿರಾತಿನ ಮೇಲೆ ಪೇಪರ್ ಅಂಟಿಸಿ ಮರೆ ಮಾಡಿದರು.
(ಸಿವಿಜಿಲ್) ಪೋರ್ಟಲ್‌ನಲ್ಲಿ ಸಾರ್ವಜನಿಕರು ನೀಡಿದ ದೂರಿನನ್ವಯ ಅಧಿಕಾರಿಗಳು ಭೇಟಿ ನೀಡಿ, ಪೇಪರ್ ಅಂಟಿಸಿ ಜಾಹಿರಾತಿಗೆ ಮರೆಮಾಡಿದರು ಎಂದು ತಿಳಿದಿದೆ.