ಮುಗಳಖೋಡ ಪುರಸಭೆಗೆ ನೂತನ ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿಯ ಸದಸ್ಯರ ನೇಮಕ;
ನಾಮ ನಿರ್ದೇಶನ ಹಾಗೂ ಆಶ್ರಯ ಸಮಿತಿ ಸದಸ್ಯರನ್ನ ಗೌರವಿಸಿ ಸನ್ಮಾನಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ;
ಹಲಗಿ ಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಮೆರವಣಿಗೆ ಮಾಡಿದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು;
ವರದಿ: ಸಂತೋಷ ಮುಗಳಿ
ಮುಗಳಖೋಡ: ಪಟ್ಟಣದ ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾಗಿ ಹಾಗೂ ಆಶ್ರಯ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಪುರಸಭೆ ಕಾರ್ಯಾಲಯದಲ್ಲಿ ಮಾ. 26 ಬುಧವಾರದಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರರಿಂದ ಸತ್ಕಾರ ಸಮಾರಂಭ ನಡೆಯಿತು.
ಇದಕ್ಕೂ ಮೊದಲು ಪಟ್ಟಣದ ಹೆಬ್ಬಾಗಿಲು (ಕ್ರಾಸ್ ಗೆ) ಆಗಮಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂರಾರು ಬೈಕುಗಳೊಂದಿಗೆ ಹಲಗೆ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಮಠಕ್ಕೆ ಬರಮಾಡಿಕೊಂಡರು. ಸದ್ಗುರು ಶ್ರೀ ಯಲ್ಲಾಲಿಂಗಶ್ವರ ಶ್ರೀಗಳ ಕರ್ತೃ ಗದ್ದಿಗೆ ದರ್ಶನ ಪಡೆದ ಶಾಸಕ ಮಹೇಂದ್ರ ತಮ್ಮಣ್ಣವರ. ನಂತರ ಪುರಸಭೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೂತನವಾಗಿ ಪುರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿ ಹಾಗೂ ನಗರ ಆಶ್ರಯ ಸಮಿತಿ ಸದಸ್ಯರಾಗಿ ಆಯ್ಕೆ ಯಾದವರನ್ನು ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.
ಪಟ್ಟಣದ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಪುಂಡಲೀಕ ಸನಸಣಿ, ಬರಮಪ್ಪ ಹಳಿಂಗಳಿ, ವಿಠ್ಠಲ ಯಡವನ್ನವರ, ಅಣ್ಣಪ್ಪ ಸೊಂಟನ್ನವರ, ಕರೆಪ್ಪ ಮಂಟೂರ ಹಾಗೂ ಪುರಸಭೆಯ ನಗರ ಆಶ್ರಯ ಸಮಿತಿಯ ಸದಸ್ಯರಾಗಿ ಶ್ರೀಮತಿ ಗೀತಾ ಹಳಿಂಗಳಿ, ಅಶೋಕ ಕದಂ, ಗಂಗಪ್ಪ ಗೋಕಾಕ ಹಾಗೂ ರಾಜಕುಮಾರ ಬಾಬಣ್ಣವರ ಆಯ್ಕೆಯಾಗಿದ್ದಾರೆಂದು ಪುರಸಭೆಯ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಸಂಜಯ ಕುಲಿಗೋಡ, ಪರಪ್ಪ ಖೇತಗೌಡರ, ರಾವಸಾಬ ಗೌಲೆತ್ತಿಣ್ಣವರ, ರಮೇಶ ಯಡವಣ್ಣವರ, ಮಹಾವೀರ ಕುರಾಡೆ, ಪರಶುರಾಮ ಕಡಕೋಳ, ಶಾಸಕರ ಆಪ್ತ ಸಹಾಯಕ ಸುಭಾಷ ಪೂಜೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹನಮಾಸಾಬ ನಾಯಕ, ಪುರಸಭೆಯ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಇಂಜಿನಿಯರ್ ಎಸ್.ಆರ್.ಚೌಗಲಾ, ಹಿರಿಯರಾದ ಹನುಮಂತ ಹೊಸಪೇಟಿ, ಶ್ರೀಕಾಂತಗೌಡ ಖೇತಗೌಡರ, ರಮೇಶ ಹೊಸಪೇಟಿ, ರಾಮಚಂದ್ರ ಕುರಾಡೆ, ಶಂಭು ಪಾಟೀಲ, ನಿವೃತ್ತ ಮುಖ್ಯಗುರು ಬಿ.ಐ.ಹುಣಸಿಕಟ್ಟಿ, ರಘುನಾಥ ಹಿಡಕಲ, ಶ್ರೀಶೈಲ ಅಂಗಡಿ, ಹಿಡಕಲ್ಲ ಗ್ರಾಮ ಪಂಚಾಯತ ಅಧ್ಯಕ್ಷ ಭೀಮಪ್ಪ ಪಾರ್ಥನಳ್ಳಿ, ಸಚಿನ ಘಂಟಿ ಇದ್ದರು.
