ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಆಧುನಿಕ ಕೃಷಿ ಅವಲಂಬನೆ ಮತ್ತು ಪಶು ಸಂಗೋಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ ಬಿ ಎನ್ ಅಸ್ಕಿ ಆಗಮಿಸಿ ಹಿಂದಿನ ಜನ ತಮ್ಮ ಆಹಾರಕ್ಕಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತದನಂತರ ಸಮಾಜದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮೇಲೆ ಅವಲಂಬೆನೆ ಹೆಚ್ಚಾಯಿತು ಹಾಗೂ ಪಶು ಸಂಗೋಪನೆ ಇಂದ. ಹೈನು ಗಾರಿಕೆ ಪ್ರಾರಂಭವಾಯಿತು ಎಂದು ಸ್ವಯಂ ಸೇವಕ/ಕಿಯರಿಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಎಸ್ ಎಸ್ ಉಮರಾಣಿ ವಹಿಸಿ ಕೃಷಿಯಲ್ಲಿ ಆಧುನಿಕತೆ ಬೆಳವಣಿಗೆಯೊಂದಿಗೆ , ವೈಜ್ಞಾನಿಕ ಕೃಷಿ ಪದ್ಧತಿ ಜಾರಿಗೆ ಬಂತು ಎಂದು ಸ್ವಯಂ ಸೇವಕ/ಕಿಯರಿಗೆ , ಕೃಷಿ ಪದ್ಧತಿಯ ವಿಧಿವಿಧಾನಗಳನ್ನು ತಿಳಿಸಿ ಕೊಟ್ಟರು. ವೇದಿಕೆಯ ಮೇಲೆ ಪ್ರೊ ಎಲ್ ಸಿ ಬಿರಾದರ್, ಶಿಬಿರದ ಅಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ, ಬಂಡಾಯ ಯುವ ಸಾಹಿತಿ ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು.ಪ್ರಾರ್ಥನೆಯನ್ನು ಲಕ್ಕಪ್ಪ ಕಾಂಬಳೆ ಹಾಡಿದರು. ಎನ್ ಎಸ್ ಎಸ್ ಗೀತೆಯನ್ನು ಪ್ರೊ ಬಿ ಎ ಕಾಂಬಳೆ ಹಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ್ ಲಠ್ಠೆ ಅಚ್ಚು ಕಟ್ಟಾಗಿ ನಿರ್ವಹಿಸಿದರು.