ಬೆಳಗಾವಿ
ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ.. ವಿಷಯ: ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ
ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಬ್ಯಾಂಕಿನ ಸೌಕರ್ಯಗಳು ಮತ್ತು ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಎಸ್ ಭಜಂತ್ರಿ ಆಗಮಿಸಿ ಜೀವನ ನಿರ್ವಹಣೆಗೆ ಹಣ ತುಂಬಾ ಮುಖ್ಯ. ಬ್ಯಾಂಕ ಅಷ್ಟೆ ಅಲ್ಲ,ಯಾವದೇ ವಿಧದಲ್ಲಿ ಸಂಪತ್ತನ್ನು ಸಂಗ್ರಹಣೆ ಮಾಡುವುದೇ ಬ್ಯಾಂಕ್ ಎಂದು ಸ್ವಯಂ ಸೇವಕ/ಸೇವಕಿಯರಿಗೆ ತಿಳಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೇಣುಕಾ ಮ್ಯಾಗೇರಿ ವಹಿಸಿ ಆನ್ ಲೈನ್ ಬ್ಯಾಂಕಿಂಗ್ ವಿವಿಧ ಸೇವೆಗಳ ಮಹತ್ವ ಕುರಿತು ಸ್ವಯಂ ಸೇವಕ/ಸೇವಕಿಯರಿಗೆ ಮಾಹಿತಿ ನೀಡಿದರು.ವೇದಿಕೆಯ ಮೇಲೆ ಭೌತಶಾಸ್ತ್ರ ಉಪನ್ಯಾಸಕರಾದ ಎಸ್ ಎಸ್ ಉಮರಾಣಿ, ಬಂಡಾಯ ಯುವ ಸಾಹಿತಿ, ಕ್ರಾಂತಿಕಾರಿ ಹಾಡುಗಾರ ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಪ್ರೊ ಬಿ ಎ ಕಾಂಬಳೆ ಪ್ರಾರ್ಥನೆ ಗೀತೆ ಹಾಡಿದರು.ಕಾರ್ಯಕ್ರಮದ ನಿವರ್ಣೆಯನ್ನು ಸ್ನೇಹಾ ಕಾಂಬಳೆ ಅಚ್ಚು ಕಟ್ಟಾಗಿ ನಿರ್ವಹಿಸಿದರು.