ಶ್ರೀ ಸಿದ್ದೇಶ್ವರ ಮಠಕ್ಕೆ 1100 ಬುಟ್ಟಿ ಕರಿಗಡಬಿನ ನೈವೇದ್ಯ…

Share the Post Now

ವರದಿ: ಸಂಗಮೇಶ ಹಿರೇಮಠ.

ವೈಭವದ ಮೆರವಣಿಗೆ, ಗ್ರಾಮದ ತಾಯಂದಿರು ಸೇರಿ ಸುಮಾರು 2-3 ಸಾವಿರ ಜನರು ಭಾಗಿ..
ಬಸವ ಪುರಾಣದ ನಿಮಿತ್ಯ ವಿಶೇಷ ಕಾರ್ಯಕ್ರಮಗಳು

ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದ ಶ್ರೀ‌ ಸಿದ್ದೇಶ್ವರ ಮಠದ ಲೋಕಾರ್ಪಣೆಯ ಹಾಗೂ ಶ್ರೀ ಶಿವಾನಂದ ಮಹಾಸ್ವಾಮಿಗಳ ಗುರುವಂದನಾ ಸಮಾರಂಭದ ನಿಮಿತ್ಯ ಹಮ್ಮಿಕೊಂಡ ಒಂದು ತಿಂಗಳ ನಿರಂತರ ಬಸವ ಮಹಾ ಪುರಾಣ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ.

ಶ್ರೀಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯುತ್ತಿರುವ ಬಸವ ಪುರಾಣದ ಹಿನ್ನೆಲೆಯಲ್ಲಿ 770 ತಾಯಂದಿರ ಅಮರ ಗನಂಘಳ ಸಂಸ್ಮರಣೆಯಲ್ಲಿ ಸುಮಾರು 1100 ಜನ ತಾಯಂದಿರು ಕರಿಗಡಬಿನ ಪ್ರಸಾದ ತಂದು ಶ್ರೀಮಠಕ್ಕೆ ಒಪ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತ ಮಠದ ಪ.ಪೂ ಶ್ರೀ ಡಾ.‌ ಮಹಾಂತಪ್ರಭು ಮಹಾಸ್ವಾಮಿಗಳು, ಹಾಗೂ ತೇರದಾಳ ವಿರಕ್ತಮಠದ ಶ್ರೀ ಶಿವಕುಮಾರ್ ದೇವರು, ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರ ಸಮ್ಮುಖದಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ನೂರಾರು ಜನರು ಕೈಯಲ್ಲಿ ಬಸವ ಧ್ವಜ ಹಿಡಿದುಕೊಂಡು ಕರಿಗಡಬಿನ ಭವ್ಯ ಮೆರವಣಿಗೆಯು ಗ್ರಾಮದ ಉಗೆಪ್ಪನ ಗುಡಿಯಿಂದ ಹಲವಾರು ರಸ್ತೆಯಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ಮಠ ತಲುಪಿತು.

ಮೆರವಣಿಗೆ ಬರುವ ಮಾರ್ಗದಲ್ಲಿ ಭಕ್ತಾದಿಗಳು ರಸ್ತೆಯ ಎರಡು ಬದಿಯಲ್ಲಿ ನೀರು ಹೊಡೆದು ರಂಗೋಲಿ ಬಿಡಿಸಿ ಹೂವು ಹಾಕಿ ಸಿಂಗರಿಸಿದ್ದರು

ಸಾಯಂಕಾಲ ಶ್ರೀಮಠದ ಗುರುಗಳಾದ ಶ್ರೀ ಶಿವಾನಂದ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶೇಗುಣಸಿ ಶ್ರೀ ಡಾ. ಮಾಹಾಂತಪ್ರಭು ದೇವರು ಬಸವ ಮಹಾ ಪುರಾಣ ನಡೆಸಿಕೊಟ್ಟರು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು

ಶ್ರೀ ಶಿವಾನಂದ ಮಹಾಸ್ವಾಮಿಗಳ ಹಾಗೂ ಶ್ರೀ ಡಾ. ಮಹಾಂತ ದೇವರನ್ನು ಭಕ್ತಾದಿಗಳು ಹಾಗೂ ಅಕ್ಕನ ಬಳಗದವರು ಸತ್ಕರಿಸಿ ಗುರುಕಾಣಿಕೆ ನೀಡಿ ತಮ್ಮ ಭಕ್ತಿಯನ್ನು ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಹಂದಿಗುಂದ ಗ್ರಾಮದ ಮುಖಂಡರು, ತಾಯಂದಿರು, ಶಾಲಾ ಮಕ್ಕಳು ಕಾರ್ಯಕರ್ತರು ಹಾಗೂ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!