ಬೆಳಗಾವಿಯ ಯಡಿಯೂರಪ್ಪ ರಸ್ತೆಯ ಅಲರವಾಡ ಸೇತುವೆ ಬಳಿ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿವೆ. ಇದರಿಂದ ಚಾಲಕರು ಪರದಾಡುತ್ತಿದ್ದಾರೆ.
ಯಡಿಯೂರಪ್ಪ ರಸ್ತೆಯ ಅಲರವಾಡ ಸೇತುವೆ ಬಳಿ ರಸ್ತೆ ಗುಂಡಿಗಳಿಂದಾಗಿ ಇಲ್ಲಿ ಸಂಚರಿಸುವ ಲಾರಿ, ಕಾರು, ದ್ವಿಚಕ್ರ ವಾಹನಗಳು ಪರದಾಡುತ್ತಿವೆ. ಪಾದಚಾರಿಗಳು ಗುಂಡಿಗಳಿಗೆ ಬಿದ್ದು ಗಾಯಗೊಂಡಿದ್ದಾರೆ.
ಇದಲ್ಲದೇ ವಾಹನಗಳ ಸಣ್ಣ, ದೊಡ್ಡ ಅಪಘಾತಗಳೂ ನಡೆಯಲಾರಂಭಿಸಿವೆ. ಈ ಬಗ್ಗೆ ನಗರಸಭೆ ಕೂಡಲೇ ಗಮನಹರಿಸಿ ಸರಿಪಡಿಸಬೇಕು ಇಲ್ಲವಾದಲ್ಲಿ ನಾಗರಿಕರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.