ಬೆಳಗಾವಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯ ವಾರ್ಷಿಕ ಸ್ನಹ ಸಮ್ಮೇಳನದಲ್ಲಿ ದೃಢ ಸಂಕಲ್ಪ ಮಾಡಿ ಆತ್ಮವಿಶ್ವಾಸದಿಂದ ಪ್ರಾಮಾಣಿಕ ಪ್ರಯತ್ನ ಮಾಡುವವರಿಗೆ ಸೋಲು ಗೆಲುವಾಗುತ್ತದೆಂದು ಕೆ.ಎ.ಎಸ್ ಅಧಿಕಾರಿ ಜೆ.ಆರ್.ಜಮಾದಾರ ಹೇಳಿದರು.
ಅವರು ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಹವ್ಯಾಸಗಳ ಬದಲಾವಣೆಯಿಂದ ಹಣೆಬರಹ ಬದಲಾಗುತ್ತದೆ. ಧನಾತ್ಮಕ ಆಲೋಚನೆಯಿಂದ ಮುನ್ನಡೆದರೆ ಅಸಾಧ್ಯವಾದುದು ಇಲ್ಲವೇ ಇಲ್ಲ. ಹುಟ್ಟು ಗುಡಿಸಿಲಿನಲ್ಲಿ ಆದರೆ ಸಾವು ಅರಮನೆಯಲ್ಲಾಗಬೇಕೆಂದು ಮಾರ್ಮಿಕವಾಗಿ ನುಡಿದರು. ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಮಾಚಕನೂರ ˌಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಮಾತನಾಡಿದರು.
ಕಾವೇರಿ ಸನದಿˌ ಮಲ್ಲಿಕಾರ್ಜುನ ಅರಳಿಮಟ್ಟಿˌ ಪದ್ಮಶ್ರೀ ಬೋಸಗಿ ಅನಿಸಿಕೆಗಳನ್ನು ಹಂಚಿಕೊಂಡರು. ರೋಹಿತ ರಡ್ರಟ್ಟಿˌ ಕಾವೇರಿ ಸನದಿ ಆದರ್ಶ ವಿದ್ಯಾರ್ಥಿ ಆದರ್ಶ ವಿದ್ಯಾರ್ಥಿನಿಯಾಗಿ ಪ್ರಶಸ್ತಿ ಪಡೆದು ಸನ್ಮಾನಕ್ಕೆ ಭಾಜನರಾದರು. ಕ್ರೀಡಾ ಸಮಗ್ರ ವೀರಾಗ್ರಣಿ ರೋಹಿತ ರಡ್ರಟ್ಟಿ (ಬಾಲಕ)ˌ ಪ್ರೇಮಾ ಬುಲಬುಲಿ (ಬಾಲಕಿ) ಪ್ರಶಸ್ತಿ ಪಡೆದು ಸತ್ಕಾರಕ್ಕೆ ಪಾತ್ರರಾದರು. ಶಿವು ಚನ್ನಣ್ಣವರˌ ರವಿ ರಡ್ರಟ್ಟಿˌ ಸವಿತಾ ಸನಸನ್ನಿˌ ಗೀತಾ ಬಟಗುರ್ಕಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗಿರೀಶ ತೇಲಿˌ ಸಾಕ್ಷಿ ಜಾಯಗೋಣಿˌ ಸಜನಾ ಮುಲ್ಲಾˌ ಪ್ರಾಜಕ್ತಾ ಕಾಂಬಳೆˌ ಬೌರವ್ವ ಕುಳಲಿˌ ಕಾವೇರಿ ಸನದಿˌ ವರ್ಷಾ ಬಡಿಗೇರ ನಗದು ಬಹುಮಾನಗಳನ್ನು ಪಡೆದುಕೊಂಡರು.
ರಮೇಶ ಬಡಿಗೇರˌ ರಾಜೇಂದ್ರ ಕುಮಠಿˌ ಲಕ್ಷ್ಮಣ ಗುಂಜಿಗಾವಿˌ ಶಿವಾನಂದ ಕುಳಲಿˌ ಮಹಾಲಿಂಗ ನಾವಿˌ ಲಕ್ಷ್ಮೀಬಾಯಿ ವಡ್ಡರˌ ಸವಿತಾ ಕಾಂಬಳೆˌ ಹಜರಬಿ ರಾಜಾಪೂರˌರಾಜಶ್ರೀ ತೇಲಿˌ ಅಲ್ಲಪ್ಪ ಮುಳ್ಳೂರˌ ಅಜೀತ ರಾಮತೀರ್ಥˌ ಗುಂಡು ರಡ್ರಟ್ಟಿˌ ಮಲ್ಲಪ್ಪ ತೇಲಿˌ ಆರ್.ಎಮ್.ಪೂಜೇರಿˌ ವಿನಾಯಕ ಬಿ ಪಾಟೀಲˌ ಸುಮನ ರಾಜಾಪೂರ ಉಪಸ್ಥಿತರಿದ್ದರು.
ವರ್ಷಾ ಬಡಿಗೇರˌ ಸಾವಿತ್ರಿ ಮಾಳಿ ನಿರೂಪಿಸಿದರು. ಸುಕನ್ಯಾ ಹರವಿ ಪ್ರಾರ್ಥಿಸಿದರು. ವಿದ್ಯಾಶ್ರೀ ಪಾಟೀಲ ಸ್ವಾಗತಿಸಿದರು. ಅರಬಾಜ ಚಿಂಚಲಿˌ ಬಸವರಾಜ ಕುಳಲಿ ಮಾಲಾರ್ಪಣೆˌ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಸುದರ್ಶನ ಕತ್ತಿ ವರದಿ ವಾಚನಗೈದರು. ಶಿಕ್ಷಕ ಎಸ್.ಬಿ.ಹಳ್ಳೂರ ಸನ್ಮಾನ ಕಾರ್ಯಕ್ರಮಕ್ಕೆ ಧ್ವನಿಯಾದರು. ವರ್ಷಾ ನಾವಿ ಶರಣು ಸಮರ್ಪಿಸಿದರು.
ಸವಿಭೋಜನದ ನಂತರ ಜರುಗಿದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಎಲ್ಲರ ಮನ ಕುಣಿಸಿತು. ಗಾಯತ್ರಿ ತೇಲಿˌ ಸುಖದೇವಿ ಬೇವನೂರ ಕಾರ್ಯಕ್ರಮ ನಿರ್ವಹಿಸಿ ಯಶಸ್ವಿಗೊಳಿಸಿದರು.
ವರದಿ : ಸಿದ್ದರೂಡ ಬಣ್ಣದ