ಬೆಳಗಾವಿ.ಕುಡಚಿ
ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದ್ದನ್ನು ಮಾತ್ರ ನೋಡದೆ, ಕೇವಲ ವೈದ್ಯ, ಇಂಜಿನಿಯರ್, ಏನೇನೋ ಆಗದೆ ವಿದ್ಯಾಭ್ಯಾಸ ನಂತರ ತಾನು ಉತ್ತಮ ಜೀವನ ಕಟ್ಟಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವುದು, ತಮ್ಮ ದೇಶಕ್ಕೆ ಸಂಸ್ಕೃತಿಗೆ ಗೌರವ ನೀಡುವಂತಹ ಸಂಸ್ಕಾರವಂತ ಶಿಕ್ಷಣ ಪಡೆದುಕೊಂಡು ಒಬ್ಬ ಉತ್ತಮ ನಾಗರಿಕನಾಗಬೇಕು ಎಂದು ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಹೇಳಿದರು.
ಅವರು ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಶ್ರೀ ಸಾಯಿ ಅವಧೂತ ಶಿಕ್ಷಣ ಸಂಸ್ಥೆಯ ಜಿ-ಇಂಟರ್ನಾಶನಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಜಿ-ಇಂಟರ್ನಾಶನಲ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೀಪ ಪ್ರಜ್ವಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸೇವೆ ನೀಡಿದ ಶಿಕ್ಷಕರಿಗೆ ಸತ್ಕರಿಸಿ ಗೌರವಿಸಿದರು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ್ ಗುಪ್ತೆ, ನಿರ್ದೇಶಕಿ ಪುಷ್ಪಾ ಗುಪ್ತೆ, ಅಭಯ ಕದ್ದು, ಪುರಭೆ ಅಧ್ಯಕ್ಷ ಹಮೀದೋದಿನ ರೋಹಿಲೆ, ಪುರಸಭೆ ಸದಸ್ಯ ಸಾದೀಕ ರೋಹಿಲೆ, ಮೊಹಶೀನ ಮಾರುಫ ಮುಶಫಿಕ ಜಿನಾಬಡೆ, ಪ್ರಾಚಾರ್ಯ ಬಸವರಾಜ ಗುರ್ಕಿ, ಶಿಕ್ಷಕರು, ವಿದ್ಯಾರ್ಥಿಗಳು ಸಹಸ್ರಾರು ಜನ ಪಾಲಕರು ಭಾಗಿಯಾಗಿದ್ದರು.