ಭಾರತದಲ್ಲಿ ಮಾತ್ರ ಒಳ್ಳೆಯ ಸಂಸ್ಕಾರ ಸಿಗಲು ಸಾಧ್ಯ: ಎಸ್ ಆರ್ ಕಂಬಾರ್.

Share the Post Now

ಬೆಳಗಾವಿ


ವರದಿ: ಸಂಗಮೇಶ ಹಿರೇಮಠ

ಮುಗಳಖೋಡ: ಭಾರತೀಯ ಸಂಸ್ಕೃತಿ, ಉತ್ತಮ ಸಂಸ್ಕಾರ,ಶಿಕ್ಷ ಣ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಕೊಳ್ಳಬೇಕು ಎಂದು ರಾಯಬಾಗ್ ಶಿಕ್ಷಣ ಸಂಯೋಜಕ ಶ್ರೀ ಎಸ್ ಆರ್ ಕಂಬಾರ್ ಹೇಳಿದರು.

ಅವರು ಪಟ್ಟಣದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತದಲ್ಲಿ ದಾನ, ಧರ್ಮವೂ ಕೂಡ ಒಂದು ಒಳ್ಳೆಯ ಸಂಸ್ಕಾರ ಮುಗಳಖೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತಹ ದಾನಿಗಳು ಹೆಚ್ಚಾಗಿ ಕಾಣಸಿಗುತ್ತಾರೆ. ಅಂತಹ ದಾನಿಗಳು ಶಾಲಾ ಉಪಕರಣಗಳನ್ನು ಕಾಣಿಕೆ ರೂಪದಲ್ಲಿ ಈ ಶಾಲೆಗೆ ನೀಡಿದ್ದು, ಶಾಲಾ ಸಿಬ್ಬಂದಿಯವರು ಅವುಗಳನ್ನ ದುರುಪಯೋಗ ಪಡಿಸಿಕೊಳ್ಳದೆ ಯಶಸ್ವಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ದಾನಿಗಳಾದ ಮಹಾಂತೇಶ್ ಕುಲಿಗೋಡ, ಮಾರುತಿ ಅಕ್ಕೆನ್ನವರ್, ರಮೇಶ್ ವಡ್ಡರ್, ಆನಂದ್ ಕಾಂಬಳೆ, ಮಹಾಲಿಂಗ ವಜ್ರಮಟ್ಟಿ, ಮೌನೇಶ್ ಪತ್ತಾರ್, ಪೂಜಾ ಶಹಾ, ಸುಭಾನಲ್ಲ ಬಿದರಿ, ಎಸ್.ಎಸ್. ಬ್ಯಾಕೂಡ, ಸುನಿಲ್ ಆಸಂಗಿ, ಮುರೆಪ್ಪ ಶೇಗುಣಸಿ, ಎಸ್ ಕೆ ಪಾಟೀಲ್, ರಮೇಶ್ ಮಾಳಗಿ ಸೇರಿದಂತೆ ಮುಂತಾದ ದಾನಿಗಳನ್ನು ಹಾಗೂ ಮುಖ್ಯೋಪಾಧ್ಯಾಯ ಆರ್.ಆರ್. ಮೈಶಾಳೆ ಅವರನ್ನು ಸತ್ಕರಿಸಿ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಗೋಪಾಲ್ ಬೆಕ್ಕೇರಿ ನಿರೂಪಿಸಿ ಆರ್ ಆರ್ ಮೈಶಾಲಿ ಸ್ವಾಗತಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ಗುರುಹಿರಿಯರು, ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಶ್ರೀ ಯಲ್ಲಾಲಿಂಗ ಶಾಲೆಯ ಎಲ್ಲ ಸಿಬ್ಬಂದಿಯವರು ಮತ್ತು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!