ಮುಗಳಖೋಡ ಪಟ್ಟಣದಲ್ಲಿ ಮಾರ್ಚ್ 28ಕ್ಕೆ “ಸಾವಯವ ಕೃಷಿ ಹಬ್ಬ”

Share the Post Now

ಬೆಳಗಾವಿ

ವರದಿ ಪ್ರಕಾಶ್ ಕಂಬಾರ


ಸಾವಯವ ಕೃಷಿ ಪಂಡಿತ, ಯೋಗಪಟು, ದಿವಂಗತ ಮಾರುತಿ ಸಿದ್ದಪ್ಪ ಅರಭಾವಿ ಇವರ ೪ನೆಯ ಪುಣ್ಯಸ್ಮರಣೋತ್ಸವ;


ಅರಭಾವಿ ಫೌಂಡೇಶನ್ ಹಾಗೂ ತಾಲೂಕ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಸಾವಯವ ಕೃಷಿಹಬ್ಬ;

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರಾಜ್ಯದ 10 ಜನರಿಗೆ ಸಾವಯವ ಕೃಷಿರತ್ನ ಪ್ರಶಸ್ತಿ ಪ್ರಧಾನ;

ಮುಗಳಖೋಡ: ರೈತನೇ ದೇಶದ ಬೆನ್ನೆಲುಬು ರೈತನೇ ಪರಮ ಶಕ್ತಿ . ಆ ಭೂ ತಾಯಿಯ ಉಳಿವಿಗಾಗಿ ಪ್ರತಿಯೊಬ್ಬ ರೈತರು ಸಾವಯವ ಕೃಷಿಯಲ್ಲಿ ಮುಂದಾಗಬೇಕು, ನಾಡು ಸಾವಯವವಾಗಲಿ ನಮ್ಮ ಜನ ವಿಷಮುಕ್ತ ಆಹಾರ ಸೇವಿಸಲಿ ಎಂಬುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅರಭಾವಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ಮಾರುತಿ ಅರಭಾವಿ ಸುದ್ದಿಗಾರರಿಗೆ ತಿಳಿಸಿದರು.

ಅವರು ಮುಗಳಖೋಡ ಪಟ್ಟಣದ ಅರಭಾವಿ ಅವರ ತೋಟದ ನಿವಾಸದಲ್ಲಿ ಬುಧವಾರ ದಿ: 15ರಂದು ಸಾಯಂಕಾಲ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬರುವ ೨೮ರಂದು ಮಂಗಳವಾರ ಅರಭಾವಿ ಅವರ ತೋಟದ ಮನೆಯ ಅಂಗಳದಲ್ಲಿ ಅರಭಾವಿ ಫೌಂಡೇಶನ್ ಮುಗಳಖೋಡ ಹಾಗೂ ಕೃಷಿ ಇಲಾಖೆ ರಾಯಬಾಗ ಇವರ ಸಹಯೋಗದಲ್ಲಿ ಸಾವಯವ ಕೃಷಿ ಹಬ್ಬವನ್ನು ಕಾರ್ಯಕ್ರಮವನ್ನು ಆಯೋಜಿಸಿದ್ದು ಸಾವಯವ ಕೃಷಿಯಲ್ಲಿ ತನ್ನದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ಕೃಷಿಯನ್ನು ಅಳವಡಿಸಿಕೊಂಡು, ಯೋಗ ಪರಿಣಿತ, ಸಾವಯವ ಕೃಷಿಕ ದಿವಂಗತ ಮಾರುತಿ ಸಿದ್ದಪ್ಪ ಅರಬಾವಿ ಅವರ 4ನೆಯ ಪುಣ್ಯ ಸ್ಮರಣೋತ್ಸವದ ಸವಿ ನೆನಪಿಗಾಗಿ ಕೃಷಿ ಹಬ್ಬವನ್ನು ಆಯೋಜನೆ ಮಾಡಿದ್ದು ಹಾಗೂ ರಾಜ್ಯದಲ್ಲಿ ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರಾಜ್ಯದ 10 ಜನರಿಗೆ ಸಾವಯವ ಕೃಷಿರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ತಿಳಿಸಿದರು.

ಸಾವಯವ ಕೃಷಿ ಹಬ್ಬದ ಕ್ರಮದ ಪರಿಕಲ್ಪನೆ: ಸಾವಯವ ಕೃಷಿಯ ಜಾಗೃತಿ ಹಾಗೂ ಸಮಗ್ರ ಚಿಂತನೆ, ಜಾನುವಾರು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕೃಷಿ ಉತ್ಪನ್ನ ಹಾಗೂ ಕೃಷಿ ಉಪಕರಣಗಳ ಪ್ರದರ್ಶನ, ಸಾವಯವ ಕೃಷಿಯಲ್ಲಿ ಶ್ರಮಿಸಿ ಯಶಸ್ಸು ಕಂಡ ರಾಜ್ಯಮಟ್ಟದ ಸಾವಯವ ಕೃಷಿ ರತ್ನ ಪ್ರಶಸ್ತಿ ಪ್ರಧಾನ, ಆಡು ಮತ್ತು ಕುರಿ ತರಬೇತಿ ಕಾರ್ಯಗಾರ ಈ ತರಬೇತಿಯಲ್ಲಿ ಪಾಲ್ಗೊಂಡ ರೈತರಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದೆಂದು ಸಂತೋಷ ಅರಭಾವಿ ತಿಳಿಸಿದರು.

ರಾಜ್ಯಮಟ್ಟದ ಸಾವಯವ ಕೃಷಿರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಇದೇ ದಿನಾಂಕ 25 ಒಳಗಾಗಿ ತಮ್ಮ ಅಧಿಕೃತ ದಾಖಲಾತಿಗಳೊಂದಿಗೆ ಕಾರ್ಯಕ್ರಮದಲ್ಲಿ ಉತ್ಪನ್ನಗಳ ಅಥವಾ ಪ್ರದರ್ಶನಗಳ ಮಳಿಗೆ ಹಾಕುವ ಹೆಚ್ಚಿಸುವವರು ದಿನಾಂಕ 23ರ ಒಳಗಾಗಿ ಆಯೋಜಕರಾದ ಅರಭಾವಿ ಫೌಂಡೇಶ್ ಅವರನ್ನ ಸಂಪರ್ಕಿಸಬಹುದು.

ಸಂಪರ್ಕಸಬೇಕಾದ ವಿಳಾಸ: ಅರಭಾವಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಸಂತೋಷ ಸಿದ್ದಪ್ಪ ಅರಭಾವಿ 8880439104 ಹಾಗೂ ಅರಭಾವಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಆನಂದ ಸಿದ್ದಪ್ಪ ಅರಭಾವಿ 7760182997 ಇವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು, ಪತ್ರ ವ್ಯವಹಾರ ಮಾಡ ಬಯಸುವವರು ಅರಭಾವಿ ಫೌಂಡೇಶನ್ ಕಾರ್ಯಾಲಯ ಮುಗಳಖೋಡ, ಪಿನ್ ಕೋಡ್ 591235 ತಾ: ರಾಯಬಾಗ, ಜಿ: ಬೆಳಗಾವಿ ಇವರನ್ನು ಸಂಪರ್ಕಿಸಬಹುದು.

Leave a Comment

Your email address will not be published. Required fields are marked *

error: Content is protected !!