ಬೆಳಗಾವಿ
(ಸಾವಯವ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಪರದಾಡುವಂತಾದ ಅನ್ನದಾತ)
ಹಾರೂಗೇರಿ : ಕೇಂದ್ರ ಸರ್ಕಾರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳಲು ರೈತರು ಇನ್ಮುಂದೆ ಈ ಪದ್ಧತಿ ಅಳವಡಿಸಿಕೊಳ್ಳಿ ಎಂದು ಹೇಳುತ್ತಿದೆ ಆದರೆ ರೈತರು ಕಷ್ಟಪಟ್ಟು ದುಡಿದು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಲ್ಲದೆ ಹಾಗೂ ಸರ್ಕಾರ ಕೊಳ್ಳುವವರ ವೇದಿಕೆ ನಿರ್ಮಾಣ ಮಾಡದೆ ರೈತರಿಗೆ ಮತ್ತಷ್ಟು ನೋವು ಕೊಡುತ್ತಿರುವುದು ಸರಿಯಲ್ಲ. ನಮ್ಮ ಭಾಗದಲ್ಲಿ ಸುಮಾರು 25 ವರ್ಷಗಳಿಂದ ಲಾಭವಾಗಲಿ ಹಾನಿಯಾಗಲಿ ಅದೇನೆಯಾದರೂ ರೈತರು ಮಾತ್ರ ತಮ್ಮ ಕಾಯಕಕ್ಕೆ ಫುಲ್ ಸ್ಟಾಪ್ ಕೊಟ್ಟ ಉದಾಹರಣೆ ಇಲ್ಲಾ ಏಕೆಂದರೆ ಅದು ಅವನ ಮಾನವೀಯತೆಯ ಗುಣ. ಜೀವಿ ಹಸಿವಿನಿಂದ ಆಹಾರವಿಲ್ಲದೆ ನರಳಬಾರದು ಎಂಬ ಪರಿಕಲ್ಪನೆಯಲ್ಲಿ ಬೆಳೆ ಬೆಳೆಯುತ್ತ ಬಂದಿದ್ದಾನೆ. ಆದ್ರೆ ಈತನ ಶ್ರಮಕ್ಕೆ ಸರ್ಕಾರ ಸ್ವಲ್ಪವೂ ಪರಿಹಾರಾತ್ಮಕ ಯೋಜನೆಗಳನ್ನು ನೀಡದಿರುವುದು ಹಾಗೂ ಬೆಳೆದ ಬೆಳೆಗಳ ವಿಕ್ರಯಕ್ಕೆ ಸೂಕ್ತ ಮಾರುಕಟ್ಟೆ ಒದಗಿಸದಿರುವುದು ವಿಪರ್ಯಾಸದ ಸಂಗತಿ. ಭಾರತ ದೇಶ ಎಲ್ಲದರಲ್ಲಿ ಮುನ್ನಡೆ ಸಾಧಿಸಿದ ದೇಶ ಎಂದು ರಾಜಕೀಯ ಭಾಷಣಗೈಯುವ ರಾಜಕಾರಣಿಗಳು ಇತ್ತ ಗಮನ ಹರಿಸಬೇಕು. ಧರೆಪ್ಪ ರಾಮತಿರ್ಥ ಅವರ ತೋಟಕ್ಕೆ ಭೇಟಿ ಕೊಟ್ಟಾಗ ಅವರು ತಮ್ಮ ಭವನೆಗಳನ್ನು ನಮ್ಮ ಮುಂದೆ ಹಂಚಿಕೊಂಡರುಮೋದಿಯವರು ಸಾವಯವ ಕೃಷಿ ಮಾಡಿ ಎಂದು ಹೇಳಿದ್ದಾರೆ ಹಾಗೇ ನಾವು ಕೂಡ ಅದನ್ನೇ ಮಾಡುತ್ತಾ ಬಂದಿದ್ದೇವೆ ಆದರೆ ಇಲ್ಲಿಯವರೆಗೆ ನಮಗೆ ಸಾವಯವ ದ್ರಾಕ್ಷಿಗಳನ್ನು ಕೊಳ್ಳುವ ಮಾರುಕಟ್ಟೆ ಸಿಕ್ಕಿಲ್ಲ. ಹ್ಯಾಬ್ರಿಡ್ ದ್ರಾಕ್ಷಿಗಳಿಗಿರುವ ಬೆಲೆಯನ್ನೇ ಇದಕ್ಕೂ ಕೇಳುವ ಜನರ ಮನೋಭಾವನೆಯನ್ನ ಬದಲಾಯಿಸುವುದು ಹೇಗೆ,ಮೊದಲು 12 ಎಕರೆ ಬೆಳಯುತ್ತಿದ್ದ ನಾವು ಸೂಕ್ತ ಮಾರುಕಟ್ಟೆ ಇಲ್ಲದಿರುವುದಕ್ಕೆ ಹಾಗೂ ಶ್ರಮದ ಬೆಲೆ ಕೊಳ್ಳುವವರಿಗೆ ತಿಳಿಯದೆ ಇದ್ದಿದ್ದಕ್ಕೆ ಇದೀಗ ಎರಡೇ ಎಕರೆ ಬೆಳೆಯುತ್ತಿದ್ದೇವೆ.ನಮ್ಮ ದ್ರಾಕ್ಷಿಗಳು ಈಗ ಮೈಸೂರು ಜಿಲ್ಲೆಗೆ ಹೋಗುತ್ತವೆ. ಇಲ್ಲಿ 40/50 ರೂಪಾಯಿಗೆ ಕೆಜಿ ತಗೊಂಡು ಅಲ್ಲಿ 110 ರೂಪಾಯಿಗೆ ಮಾರಾಟ ಮಾಡುತ್ತಾರೆ. ಇದೆಲ್ಲ ಮಾರಾಟದ ವ್ಯವಸ್ಥೆ ನಮಗೆ ನೇರವಾಗಿ ಸಿಗುತ್ತಿಲ್ಲ ಎಂಬುದೇ ನಮಗೆ ನೋವು ಹಾಗೂ ಬೇಲಿ ನಿರ್ಮಿಸಲು ಸಬ್ಸಿಡಿ ಸಾಲಕ್ಕೆ ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಸಾಲ ನೀಡುತ್ತಿಲ್ಲ ಹಾಗಾಗಿ ನಾವು ದ್ರಾಕ್ಷಿ ಬೆಳೆಯಬೇಕೋ ಬೇಡವೋ ಎನ್ನುತ್ತಾರೆ ಧರೆಪ್ಪ ಅವರು.ಈ ದ್ರಾಕ್ಷಿಗಳು ಬಹಳ ದಿನಗಳವರೆಗೆ ಬಳಸಲು ಯೋಗ್ಯ ಹಾಗೂ ಉತ್ತಮ ರುಚಿ ಹೊಂದಿರುವ ಕಾಯಿಗಳು. ಇವುಗಳಿಗೂ ಹ್ಯಾಬ್ರಿಡ್ ದ್ರಾಕ್ಷಿಗಳಿಗೂ ಬಹಳಷ್ಟು ವ್ಯತ್ಯಾಸವಿದೆ ಹಾಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾವಯವ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ನ್ಯಾಯ ದೊರಕಿಸಲಿ ಹಾಗೂ ಧರೆಪ್ಪ ರಾಮತೀರ್ಥ ಅವರು ಸಲ್ಲಿಸಿದ ಸಬ್ಸಿಡಿ ಸಾಲಕ್ಕೆ ಸರ್ಕಾರ ಅನುವು ಮಾಡಿ ಅವರ ಬೆಳೆಗೆ ಆಶಾಕಿರಣವಾಗಲಿ ಎಂಬುದೇ ನಮ್ಮಾಶಯ.
ಅಭಿಪ್ರಾಯಗಳು :
1) ಸರ್ಕಾರ ಬೇಲಿ ನಿರ್ಮಿಸಲು ಸಬ್ಸಿಡಿ ಸಾಲ, ಬೆಳೆ ಹಾನಿ ಸಹಾಯಧನ ಕೊಡುತ್ತಿಲ್ಲ ಆದರೆ ಸೂಕ್ತ ಮಾರುಕಟ್ಟೆಯಾದರೂ ಒದಗಿಸಲಿ – ಧರೆಪ್ಪ ಜಿನ್ನಪ್ಪ ರಾಮತೀರ್ಥ ಸಾವಯವ ದ್ರಾಕ್ಷಿ ಬೆಳೆದವರು ಹಾರೂಗೇರಿ
2)
ಹೊಸದಾಗಿ ದ್ರಾಕ್ಷಿ ಬೆಳೆಯುವ ರೈತರಿಗೆ ಉದ್ಯೋಗ ಖಾತ್ರಿಯಲ್ಲಿ ಸಹಾಯಧನದ ಯೋಜನೆ ಇದೆ, ಹಳೆಯ ಪ್ಲಾಂಟ್ ಗಳಿಗೆ ಇಲ್ಲಾ ಹಾಗೂ ದ್ರಾಕ್ಷಿ ಮಾರಾಟಕ್ಕೆ ವೆಂಡರ್ಗಳನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿಕೊಡುತ್ತೇವೆ.-
ಅಶೋಕ ಕರೆಪ್ಪಗೋಳ
ಎ ಎಚ್ ಓ,
ತೋಟಗಾರಿಕೆ ಇಲಾಖೆ, ರಾಯಬಾಗ
ವರದಿ : ಸುನೀಲ್ ಕಬ್ಬೂರ ಹಾರೂಗೇರಿ