*ದಿ.13 ರಿಂದ ಪುರುಷ,ಹಾಗೂ ಮಹಿಳೆಯರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆರಂಭ*
ಬೆಳಗಾವಿ.ರಾಯಬಾಗ:ತಾಲೂಕಿನ ಪರಮಾನಂದವಾಡಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರಾ ಕಮಿಟಿ, ಶ್ರೀ ಗುರುಸಿದ್ದೇಶ್ವರ ಯುವಕ ಸಂಘ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಅಮೆಚೂರ್ ಕಬಡ್ಡಿ ಫೆಡರೇಶನ್ ಅಪ್ ಇಂಡಿಯಾ ಅನುಮತಿಯೊಂದಿಗೆ ಇವುಗಳ ಸಹಯೋಗದಲ್ಲಿ ಗುರುವಾರದಿಂದ ದ ಶನಿವಾರ ದಿ. 15 ರವೆರೆಗೆ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಪರಮಾನಂದವಾಡಿಯಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಅತ್ಯಾಕರ್ಷಕ ಬಹುಮಾನಗಳು : ಪ್ರಥಮ ಬಹುಮಾನ 50 ಸಾವಿರದಾ ಒಂದು ರೂಪಾಯಿ ದ್ವಿತೀಯ ಬಹುಮಾನ 30 ಸಾವಿರದಾ ಒಂದು ರೂಪಾಯಿ ತೃತೀಯ ಬಹುಮಾನ 15 ಸಾವಿರದಾ ಒಂದು ರೂಪಾಯಿ, ಚತುರ್ಥ ಬಹುಮಾನ 15 ಸಾವಿರದಾ ಒಂದು ರೂಪಾಯಿ ಹಾಗೂ ತಲಾ ಒಂದೊಂದು ಟ್ರೋಪಿಗಳು ಇವೆ. ಪ್ರವೇಶ ಶುಲ್ಕ 700 ರೂಪಾಯಿಯೊಂದಿಗೆ ಆಸಕ್ತ ಕಬಡ್ಡಿ ಆಟಗಾರರು ಹೆಸರು ನೋಂದಾಯಿಸಬಹುದು.
ಶುಕ್ರವಾರ ದಿನಾಂಕ 14 ರಿಂದ ಶನಿವಾರ ದಿನಾಂಕ 15 ರ ವರೆಗೆ ಮಹಿಳೆಯರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿವೆ.ಅತ್ಯಾಕರ್ಷಕ ಬಹುಮಾನಗಳು : ಪ್ರಥಮ ಬಹುಮಾನ 30 ಸಾವಿರದ ಒಂದು ರೂಪಾಯಿ ದ್ವಿತೀಯ ಬಹುಮಾನ 20 ಸಾವಿರದ ಒಂದು ರೂಪಾಯಿ ತೃತೀಯ ಬಹುಮಾನ 10 ಸಾವಿರದಾ ಒಂದು ರೂಪಾಯಿ ಚತುರ್ಥ ಬಹುಮಾನ 10 ಸಾವಿರಾದಾ ಒಂದು ರೂಪಾಯಿ ಹಾಗೂ ತಲಾ ಒಂದೊಂದು ಟ್ರೋಫಿ ಇವೆ.
ಪ್ರವೇಶ ಶುಲ್ಕ 500 ರೂಪಾಯಿಯೊಂದಿಗೆ ಆಸಕ್ತ ಕಬಡ್ಡಿ ಆಟಗಾರ್ತಿಯರು. ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಘದ ಕಾರ್ಯದರ್ಶಿ ಶ್ರೀ ಸುರೇಶ ಅಂಬಿ ಮೊ.9900109633 ಉಪಕಾರ್ಯದರ್ಶಿ ಶ್ರೀ ರಾಜು ಚಿಗರೆ ಮೊ.7349593308 ಸಂಪರ್ಕಿಸಹುದು ಎಂದು ಶ್ರೀ ಗುರು ಸಿದ್ದೇಶ್ವರ ಯುವಕ ಸಂಘದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.
ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*





