ಬೆಂಗಳೂರು 16 ಸಮಾಜದ ಅಭಿವೃದ್ಧಿ ಹಾಗೂ ಬಡವ ಹಿಂದುಳಿದ ವರ್ಗಗಳ ಒಳತಿಗಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡುವರನ್ನು ಸಮಾಜದಲ್ಲಿ ಗುರುತಿಸಿ ಪ್ರಶಸ್ತಿ ಸನ್ಮಾನ ಮಾಡಿದರೆ ಮತ್ತಷ್ಟು ಸ್ಫೂರ್ತಿ ನೀಡಿದಂತಾಗುತ್ತ ದೆಂದು ಬೆಂಗಳೂರ್ ಓರಿಯೆಂಟಲ್ ಪೌಂಡೇಶನ್ ಸಂಸ್ಥಾಪಕ ರವಿಕುಮಾರ ಹೇಳಿದರು.
ಅವರು ರವಿವಾರದಂದು ಬೆಂಗಳೂರ ಕನ್ನಡ ಸಾಹಿತ್ಯ ಪರಿಷತ್ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸರಕಾರದ ಮಾನ್ಯತೆ ಪಡೆದ ಓರಿಯೆಂಟಲ್ ಪೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭನಲ್ಲಿ ಮಾತನಾಡಿ ಸಮಾಜದಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ನೊಂದ ಬೆಂದವರ ಬಾಳಿಗೆ ಬೆಳಕಾಗಿ ನಿಂತರೆ ಪ್ರಶಸ್ತಿ ತಾನಾಗಿ ಒಲಿದು ಬರುತ್ತವೆಂದು ಹೇಳಿದರು.
ಶ್ರೀ ನಿವಾಸ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆ ಅನ್ನೋದು ಮಾನವನ ಧರ್ಮ ಸಮಾಜ ಸೇವೆ ಮಾಡೋದನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವ ರವಿಕುಮಾರ ಆವರ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಲನ ಚಿತ್ರ ಖ್ಯಾತ ನಟಿ ಕಾಮಿನಿದರನ್ ಪುಷ್ಪಲತಾ. ಟಿ ತ್ಯಾಗರಾಜ್. ಡಾ ಮಂಜುಳಾ ಮಹಾದೇವ. ಎಸ್ ಎಲ್ ರವಿ. ಶೋಭಾ ರಾಣಿ. ಗಣೇಶ ಗೌಡಾ. ಪ್ರೇಮಾ ರವಿ.ಗೋಪಾಲ ರೆಡ್ಡಿ . ನಾಗೇಶ ಗೌಡಾ. ಎಂ ಸಿ ಚಂದ್ರಪ್ಪ ಸೇರಿದಂತೆ ಅನೇಕರಿದ್ದರು. ಮುರಿಗೆಪ್ಪ ಬಸಪ್ಪ ಮಾಲಗಾರ.ಸಿದ್ದಪ್ಪ ಬಾಡಗಿ.ಪರಮಾನಂದ ಸಣ್ಣಟ್ಟಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 103 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು..ಕಾರ್ಯಕ್ರಮವನ್ನು ರಾಧಾ ಶ್ಯಾನ್ಭೋಗ್ ನಿರೂಪಿಸಿ, ವಂದಿಸಿದರು.





