ಓಟು ಮಾರಾಟಕ್ಕಿದೆ, ಕಿರುಚಿತ್ರದ ಪೋಸ್ಟರ್ ಬಿಡುಗಡೆ

Share the Post Now


ಬೆಂಗಳೂರ : ಕಿನ್ನಾಳ ಟಾಕೀಸ್ ಲಾಂಛನದಡಿ ನಿರ್ಮಾಣ ಆಗಿರುವ ‘ಓಟು ಮಾರಾಟಕ್ಕಿದೆ’ ಕಿರುಚಿತ್ರದ ಮೊದಲ ಪೋಸ್ಟರ್ ಅನ್ನು ಕನ್ನಡದ ರ‍್ಯಾಪ್‌ಸ್ಟಾರ್ ಚಂದನ್‌ಶೆಟ್ಟಿ ಅವರು ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದರು.
ಎಲೆಕ್ಷನ್ ಬಂದಿರುವ ಈ ಸಂದರ್ಭದಲ್ಲಿ ಟೈಟಲ್ನಿಂದಲೆ ಈ ಕಿರುಚಿತ್ರ ಸದ್ದು ಮಾಡುತ್ತಿದ್ದು. ವಿಶೇಷ ಎಂದರೆ ಪ್ರಜ್ವಲ್ ಕಿನ್ನಾಳ ಎನ್ನುವ ೮ ವರ್ಷದ ಬಾಲಕ ನಾಯಕನಾಗಿ ನಟಿಸಿ, ರಚಿಸಿ, ನಿರ್ದೇಶಿಸಿದ್ದಾನೆ.. ಹಾಗೂ ಮಕ್ಕಳೇ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. (ದೊಡ್ಡವರಂತೆ ಮೀಸೆ ಅಂಟಿಸಿಕೊಂಡು). ಎನ್ ಎಂ.ವಿಶ್ವ, ಶ್ರೀಧರ ಕಶ್ಯಪ್, ವೈಭವ ನಾಗರಾಜ ಆರತಿ, ರಮೇಶ್ ಪ್ರೇಮ್, ಲಕ್ಷಿತಾ ಕಂಠದಾನ ಮಾಡಿದ್ದಾರೆ.


ಶ್ರೀಮತಿ ಭವಾನಿ ಕಿನ್ನಾಳರಾಜ್ ಅವರು ಈ ಕಿರುಚಿತ್ರ ನಿರ್ಮಿಸಿದ್ದು, ಜಿ ವಿ ನಾಗರಾಜ್ ಛಾಯಾಗ್ರಹಣ, ಆಕಾಶ್ ಪರ್ವ ಸಂಗೀತ, ಕೆಜಿಎಫ್ ಮೊದಲಾದ ಹಲವಾರು ಹಿಟ್ ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿರುವ, ಹಿಟ್ಲರ್ ಚಲನಚಿತ್ರ ನಿರ್ದೇಶಕ ಕಿನ್ನಾಳರಾಜ್ ಚಿತ್ರಕಥೆ, ಸಂಭಾಷಣೆ ಬರೆಯುವದರ ಜೊತೆಗೆ ಸಂಕಲನವನ್ನು ಮಾಡಿದ್ದಾರೆ. ಟೈಟಲ್ ಗ್ರಾಫಿಕ್ಸ್ ಪ್ರಕಾಶ್ ಡಿ .ಜೆ, ಶಿವಶರಣ ಸುಗ್ನಳ್ಳಿ, ಧ್ವನಿಮುದ್ರಣ ಜಯಚಂದ್ರ ಮಾಡಿದ್ದಾರೆ. ಪತ್ರಿಕಾಪ್ರಚಾರ ಆರ್.ಚಂದ್ರಶೇಖರ್, ಡಾ ಪ್ರಭು ಗಂಜಿಹಾಳ. ಡಾ. ವೀರೇಶ್ ಹಂಡಿಗಿ ಅವರದ್ದಾಗಿದೆ.


ಕಿರು ಚಿತ್ರದಲ್ಲಿ ವಿಷ್ಣು, ವಿಜಯಕುಮಾರ್, ಅಗಸ್ತ್ಯ, ಮನೋಜ್, ಸೃಷ್ಟಿ, ಮಾನಸ, ಆರಾಧ್ಯ,ಸಾಹಿತ್ಯ, ಸುಹಾಸ್, ದಿಲೀಪ್, ಅನ್ವಿತಾ, ಕುನಾಲ್, ಯಶವಂತ್,ಶ್ರೀ ನಾಗರ್ನಿಕ, ಆಕಾಶ್. ವಿಕಾಸ್. ಪುಟ್ಟರಾಜು, ಸಹನಾ, ಅನ್ವೀಕಾ, ಅಭಿ , ಆರ್ನವ್ ಇನ್ನೂ ಅನೇಕ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಈ ಕಿರುಚಿತ್ರವು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
*
ವರದಿ-ಡಾ.ಪ್ರಭು ಗಂಜಿಹಾಳ.
ಮೊ-೯೪೪೮೭೭೫೩೪೬.

Leave a Comment

Your email address will not be published. Required fields are marked *

error: Content is protected !!