ನಮ್ಮ ಸಂವಿಧಾನ

Share the Post Now


ಬಾಬಾಸಾಹೇಬರ ಪರಿಶ್ರಮದ ಸತ್ಪಲ ನಮ್ಮ ಸಂವಿಧಾನ
ಪೂರ್ವ ಪೀಠಿಕೆಯ ನುಡಿ ತೋರಣ ಸ್ವಾಭಿಮಾನ ದೇಶಾಭಿಮಾನದ ಹೊನ್ನ ಕಿರಣ

ವೈವಿಧ್ಯತೆಯ ಅಂಗಳದಲ್ಲಿ
ಬಿರಿದ ಐಕ್ಯತೆಯ ಸುಂದರ ಪುಷ್ಪ ನಮ್ಮ ಸಂವಿಧಾನ

ಜಾತ್ಯತೀತ ಮಂದಿರದಲ್ಲಿ
ಹಕ್ಕುಗಳ ದೀವಟಿಗೆ ಹಿಡಿದು
ಕರ್ತವ್ಯಗಳ ಜಗುಲಿಯ ಮೇಲೆ ಭಗವಂತನ ದಿಗ್ದರ್ಶನ ಮಾಡಿದ ಧೀಮಂತ ಚೇತನ                   ನಮ್ಮ ಸಂವಿಧಾನ


ಸುದೀರ್ಘ ದಿನಗಳ ಪರ್ಯಂತ ಬಾಬಾಸಾಹೇಬರ ಮಾನಸ ಗರ್ಭದಿಂದ ಆವಿರ್ಭವಿಸಿ
ಅನವರತ  ಪ್ರಜೆಗಳ  ಕಲ್ಯಾಣ ಬಯಸಿ

ಶಕ್ತಿ ಯುಕ್ತಿಗಳು ಚೆನ್ನಾಗಿ ಅಳವಟ್ಟು
ಜನಮಾನಸದೊಳು ಸಂವಿಧಾನ ಶಿಲ್ಪಿ ಎಂಬ ಬಿರುದಾವಳಿಗೆ ಪಾತ್ರರಾದ ಡಾ.ಅಂಬೇಡ್ಕರ್ ನಿತ್ಯ ಸತ್ಯ ಪ್ರಾತಃಸ್ಮರಣೀಯ ಪೂಜ್ಯನೀಯರು

ಇಂದು ನಮ್ಮ ಸಂವಿಧಾನ ಸಮರ್ಪಣಾ ದಿನ
ದೇಶದೆಲ್ಲೆಡೆ ಹಮ್ಮಿಕೊಂಡ ಅಭಿಮಾನದಿ ಚಿಂತಕರ ಚಾವಡಿ ಅರಿವಿನ ಅರಮನೆಯಲ್ಲಿ ಚಿಂತನ ಮಂಥನಗಳ
ಸಂಸ್ಮರಣದ ಪರಿಮಳ ಸೂಸುತ್ತ
ಕೋಟಿ ಕೋಟಿ ಹೃದಯಗಳಲ್ಲಿ “ಒಂದೇ ಭಾರತ ಒಂದೇ ಸಂವಿಧಾನ” ಎಂಬ ದಿವ್ಯ ಮಂತ್ರ ಪಠಣ  ಒಮ್ಮನದಿಂದ ಮೊಳಗುತ್ತಲೇ ಇರಲಿ ಐಕ್ಯತೆಯ ಗುಣಗಾನ

*ಕವಿ:ಡಾ. ಜಯವೀರ ಎ. ಕೆ.*
       *ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!