ರಾಜ್ಯದ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಹಲವು ಸಮುದಾಯ ನಾಯಕರುಗಳಿಗೆ ಅದೇ ಸಮುದಾಯದ ಮುಖಂಡರು ಬೆಂಬಲ ಸೂಚಿಸುವುದು ಸಾಮಾನ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬಕ್ಕೆ ನಮ್ಮ ಬೆಂಬಲ ಎಂದು ವಿವಿಧ ದಲಿತ ಪರ ಸಂಘಟನೆಗಳು ಮಾಹಿತಿ ಹಂಚಿಕೊಂಡವು.
ವಾಯ್ಸ ಓವರ್ : ಇಂದು ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿವಿಧ ದಲಿತಪರ ಸಂಘಟನೆ ಮುಖಂಡರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಸಮುದಾಯದ ನಾಯಕರನ್ನ ಬಿಟ್ಟು ಕೊಡುವ ಮಾತೆ ಇಲ್ಲಾ ಎಂದರು. ರಾಜಕೀಯ ನಾಯಕರು ಯಾವುದೇ ಪಕ್ಷದಲ್ಲಿ ಇರಲಿ ಅವರು ನಮ್ಮವರು ಎಂದ ಮೇಲೆ ನಮ್ಮ ಬೆಂಬಲ್ ನಮ್ಮ ದಲಿತ ರಾಜಕೀಯ ಮುಖಂಡರಿ ಎಂದು ನಗರದಲ್ಲಿ ಮಹಾಲಿಂಗಪ್ ಕೋಲಕಾರ ದಲಿತ ಪ್ಯಾಂಥರ್ಸ್ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಯಮಕನಮರಡಿಯಿಂದ ಸತೀಶ ಜಾರಕಿಹೊಳಿ, ಗೋಕಾಕನಿಂದ ರಮೇಶ ಜಾರಕಿಹೊಳಿ, ಅರಭಾವಿಕ್ಷೇತ್ರದಿಂದ ಬಾಲಚಂದ್ರ ಜಾರಕಿಹೊಳಿ,ಕುಡುಚಿ ಮಹೇಶ ತಮ್ಮಣ್ಣವರಿಗೆ ನಮ್ಮ ಬೆಂಬಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದುರ್ಗೇಶ ಮೇತ್ರಿ, ಅರುಣ ನಿರಗಟ್ಟಿ, ಸವಿತಾ ಕಾಂಬಳೆ,ಶ್ರೀಕಾಂತ ಮುಚ್ಚಂಡಿ,ಸಾಯಿನಾಥ ಕೋಲಕಾರ,ಯಮನವ್ವಾ ಮಾದರ ಉಪಸ್ಥಿತರಿದ್ದರು.