ಬೆಳಗಾವಿ.
ಮೀಸಲಾತಿ ಕೋರಿ ಪ್ರತಿಭಟನೆ ನಡೆಸಿದ ಪಂಚಮಸಾಲಿ ಸಮಾಜದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸರ್ಕಾರದ ಧೋರಣೆ ಖಂಡಿಸಿ ಹಾರೂಗೇರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಹಾರೂಗೇರಿ ಕ್ರಾಸನ ಬಸವೇಶ್ವರ ವೃತ್ತದಲ್ಲಿ ಒಂದು ಗಂಟೆ ಕಾಲ ಜತ್ತ-ಜಾಂಬೋಟಿ ಹಾಗೂ ಮಿರಜ-ಜಮಖಂಡಿ ರಸ್ತೆಗೆ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ನ್ಯಾಯವಾದಿ ರಾಹುಲ ಕಟಗೇರಿ ರಾಜ್ಯ ಸರಕಾರ 21ನೇ ಶತಮಾನದಲ್ಲಿ ಪಂಚಮಸಾಲಿ ಸಮಾಜವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ. ಲಿಂಗಾಯತ ವಿರೋಧಿ ಸಿದ್ದರಾಮಯ್ಯ ನ್ಯಾಯ ಕೇಳಲು ಹೋದ ನಮ್ಮ ಸಮಾಜದ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಎಡಿಜಿಯನ್ನು ವಜಾ ಗೊಳಿಸಬೇಕು ಹಾಗೂ ಕೂಡಲೇ ಸಮಾಜದ ಶಾಸಕರು ರಾಜೀನಾಮೆ ನೀಡಿ ಹೊರ ಬಂದು ಸರಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂಬ ಮನವಿಯನ್ನು ರಾಯಬಾಗ ತಹಶೀಲ್ದಾರ್ ಸುರೇಶ್ ಮುಂಜೆ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.
ನಂತರ ಸಮಾಜದ ಮುಖಂಡರಾದ ಅಶೋಕ ಗುಡೋಡಗಿ ಮಾತನಾಡಿದರು.
ಮುಂಜಾಗ್ರತಾ ಕ್ರಮವಾಗಿ ಕುಡಚಿ ತನಿಖಾ ಪಿಎಸ್ಐ ಶಿವರಾಜ್ ಧರಿಗೋಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ ಖವಟಗೊಪ್ಪ, ಸಿದ್ದು ಪಾಟೀಲ, ಮುಕ್ಕೇರಿ, ಹಾಗೂ ಇತರೆ ಸಿಬ್ಬಂದಿ ಬಂದೋಬಸ್ತ ಒದಗಿಸಿ ನಂತರ ಸಂಚಾರ ದಟ್ಟಣೆ ನಿಯಂತ್ರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಅಶೋಕ್ ಗುಡೋಡಗಿ, ಪುರಸಭೆ ಸದಸ್ಯರಾದ ಕಾಂತು ಬಾಡಗಿ, ಮಲ್ಲಪ್ಪ ಐನಾಪುರ.ವಿನಾಯಕ ಮುಡಶಿ, ಬಸವರಾಜ ಕೋತ್ ಸುನೀಲಗೌಡ ಪಾಟೀಲ್ ಸೇರಿದಂತೆ ತಾಲ್ಲೂಕಿನ ನೂರಾರು ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.
ಇದೆ ವೇಳೆ ನಿವೃತ್ತ ಪ್ರಾಚಾರ್ಯರುರಾದ ಬಸವರಾಜ ಅಜೂರೆ, ಸರಕಾರದ ದೋರಣೆ ವಿರುದ್ಧ ಹರಿಹಾಯ್ದರು
ವರದಿ:ಕೆ ಎಸ್. ಕಾಂಬಳೆ