ಬೆಳಗಾವಿ. ರಾಯಬಾಗ
ಬೆಳಗಾವಿ :ಸಾರ್ವತ್ರಿಕ ವಿಧಾನಸಭಾ ಕುಡಚಿ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಪಿ ರಾಜೀವ್ ಅವರು ಮರಾಕುಡಿ ಗ್ರಾಮದ ಲಕ್ಷ್ಮೀ ದೇವರ ದರ್ಶನ ಪಡೆದರು.
ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿ ಕುಡಚಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇನ್ನೊಮ್ಮೆ ಕುಡಚಿ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗಾಗಿ ನನಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಜನರ ಹಾಗೂ ರೈತರ, ಬಡವರ,ಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದೇನೆ ಜನ ಸೇವಕನಾಗಿ ದುಡಿಯುವ ಬಿ ಜೆ ಪಿ ಪಕ್ಷಕ್ಕೆ ನಿಮ್ಮ ಅಮೂಲ್ಯ ಮತ ನೀಡಿ ಆರಿಸಿ ತರಬೇಕೆಂದರು.ಚುನಾವಣೆ ಆದ ನಂತರ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಮಯದಲ್ಲಿ ಯಮನಪ್ಪ ದುರದುಂಡಿ. ಹಣಮಂತ ದುರದುಂಡಿ. ದುಂಡಪ್ಪ ಬಡಿಗೇರ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಅಂಗಡಿ. ಅಣ್ಣಪ್ಪ ಪಾಟೀಲ. ಮಾದೇವ ಅಂಗಡಿ. ಅಣ್ಣಪ್ಪ ಲೋಕಣ್ಣವರ. ಮಲ್ಲಪ್ಪ ನಾವಿ. ಸಿದ್ದಪ್ಪ ದುರದುಂಡಿ. ಮಲ್ಲಪ್ಪ ದುರದುಂಡಿ. ಪ್ರಕಾಶ ಹುಲ್ಯಾಳ. ಸಂಜು ದುರದುಂಡಿ. ಸುರೇಶ ಮರಿಚಂಡಿ. ಬಸಪ್ಪ ಅಂಗಡಿ. ಕೆಂಪಣ್ಣ ಬಳಿಗಾರ ಸೇರಿದಂತೆ ಅನೇಕ ಬಿ ಜೆ ಪಿ ಕಾರ್ಯಕರ್ತರಿದ್ದರು.





