ಕುಡಚಿ :ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ ಅದೇ ತರನಾಗಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಅವರು ಶಾಸಕ ಪಿ ರಾಜೀವ್ ಅವರೇ ನನ್ನ ವಿರುದ್ಧ ಸ್ಪರ್ಧೆ ಮಾಡಬೇಕೆಂದು ಸವಾಲ್ ಅನ್ನು ಹಾಕಿದ್ದಾರೆ
ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಹೇಂದ್ರ ತಮ್ಮಣ್ಣವರ ಮಾತನಾಡಿ ಈ ಹಿಂದೆ ಅವರದೇ ಕಾರಿಗೆ ಕಾರಿಗೆ ತಾವೇ ಬೆಂಕಿ ಹಚ್ಚಿಕೊಂಡು ವಿರೋಧ ಪಕ್ಷದವರ ಮೇಲೆ ಹಾಕಿದರು
ಮತ್ತು ಸುಮ್ಮನೆ ಕೈ ಮುರಿದ ನಾಟಕವಾಡಿ ನನಗೆ ಅಪಘಾತ ಮಾಡಿದರು ಎಂದು ಹೇಳಿದರು
ಹಾಗಾಗಿ ನನಗೆ ಬಿಜೆಪಿಯ ಯಾವ ಅಭ್ಯರ್ಥಿ ಗಳ ಪಟ್ಟಿ ಬಂದಿದಿಯೋ ನನಗೆ ಗೊತ್ತಿಲ ನಾನು ಕುಡಚಿ ಪಟ್ಟಣದ ಆರಾಧ್ಯ ದೈವ ಮಾಸಿಬಿ ಮೇಲೆ ಆಣೆ ಪ್ರಮಾಣ ಮಾಡಿತ್ತೇನೆ ಈ ಬರುವಂತ ವಿಧಾನಸಭಾ ಚುನಾವಣೆಯಲ್ಲಿ ಪಿ ರಾಜೀವ್ ಅವರೇ ನನ್ನ ವಿರುದ್ಧ ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವುದು ಒಳ್ಳೆಯದು ಎಂದಿದ್ದಾರೆ
ಪಿ ರಾಜೀವ್ ಅವರು ಇದೆ ಕ್ಷೇತ್ರದಲ್ಲಿ ಇರಬೇಕು ಮತ್ತು ಈ ಬರುವಂತಹ ಚುನಾವಣೆ ಮತದಾರರ ಒಲವು ಯಾರ ಮೇಲೆ ಇದೆಯೆಂದು ಕಣ್ಣಾರೆ ನೋಡಬೇಕು ಹಾಗಾಗಿ ರಾಜೀವ್ ಅವರು ಇದೇ ಕ್ಷೇತ್ರದಲ್ಲೇ ಇರಬೇಕು ಬೇಕೆಂದು ಮಹೇಂದ್ರ ತಮ್ಮಣ್ಣವರ ಅವರು ಸವಾಲ್ ಹಾಕಿದ್ದಾರೆ