ಬೆಳಗಾವಿ. ರಾಯಬಾಗ
ಮುಂಬರುವ ವಿಧಾನ ಸಭೆಯ ಚುನಾವಣೆಯ
ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್
ಇಲಾಖೆ ಹಾಗೂ ಸಶಸ್ತ್ರ ಮೀಸಲು ಪಡೆಯ ಸೈನಿಕರು ಪಟ್ಟಣದ
ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.
ನಂತರ ಡಿಎಸ್ಪಿ ಶ್ರೀಪಾದ ಜಲ್ದೆ ಮಾತನಾಡಿ ಚುನಾವಣೆಯಲ್ಲಿ
ಶಾಂತಿ ಕಾಪಾಡಲು ಆಗಮಿಸಿದ ಸೈನಿಕರ ಜೊತೆಗೆ ಸಾರ್ವಜನಿಕರು
ಅಸಭ್ಯವಾಗಿ ವರ್ತಿಸದೆ ಒಳ್ಳೆಯ ರೀತಿಯಿಂದ
ನಡೆದುಕೊಳ್ಳಬೇಕು. ಏನಾದರೂ ತಂಟೆ ತಕರಾರು
ಮಾಡಿದರೆ ಕಾನೂನು ರೀತಿ ಸೂಕ್ತ ಕ್ರಮ
ಜರುಗಿಸಬೇಕಾಗುತ್ತದೆ ಎಂದರು.
ರಸ್ತೆಯುದ್ಧಕ್ಕೂ ಸ್ಥಳೀಯರು ಪೊಲೀಸ ಹಾಗೂ
ಸೈನಿಕರ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹೂಮಳೆ
ಸುರಿಸಿದರು, ಅಲ್ಲಲ್ಲಿ ಆರತಿ ಬೆಳಗಿ ಸ್ವಾಗತಿಸಿದ ದೃಶ್ಯ ಎಲ್ಲರ ಮನ
ತಣಿಯುವಂತೆ ಮಾಡಿತು.
ಇದೇ ಸಂದರ್ಭದಲ್ಲಿ ಡಿಎಸ್ಪಿ ಶ್ರೀಪಾದ ಜಲ್ದೆ, ಅಸಿಸ್ಟಂಟ್
ಕಮಾಂಡರ ಪ್ರತೀಕ ಸಾವಂತ, ಸಿಪಿಐ ರವಿಚಂದ್ರ ಡಿ.ಬಿ, ಪಿಎಸ್‍ಐ ರೇಣುಕಾ
ಜಕನೂರ, ಮಾಳಪ್ಪ ಪೂಜೇರಿ, ಚಾಂದಬಿ ಗಂಗಾವತಿ,
ಪಿ.ಬಿ.ಪೂಜಾರ, ಹವಾಲ್ದಾರ ಕುಮಾರ ಪವಾರ, ಪ್ರಕಾಶ
ಕವಟಕೊಪ್ಪ, ರಾಜು ಕಟೇಕರಿ, ಅಶೋಕ ಶಾಂಡಗೆ ಹಾಗೂ ಇನ್ನಿತರ ಸಿಬ್ಬಂದಿಗಳು
ಉಪಸ್ಥಿತರಿದ್ದರು.