ಬೆಳಗಾವಿ. ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಖ್ವಾಜಾ ನಿಜಾಮುದ್ದೀನ್ ವಕ್ಫ್ ಕಮೀಟಿ ಮುಸ್ಲಿಂ ಜಮಾತ್ ಕಮೀಟಿಯವರು ಮಸೀದಿ ಕಟ್ಟಡ ಹಾಗೂ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದರು.
ಪರಮಾನಂದವಾಡಿ ಗ್ರಾಮದ ಮಸೀದಿಯ ಕಟ್ಟಡ ಮತ್ತು ಜೀರ್ಣದ್ಧಾರಕ್ಕೆ ಸುಮಾರು 7 ಲಕ್ಷ ಮೊತ್ತದ ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಸುಟ್ಟಟ್ಟಿ ಲಕ್ಷ್ಮೀದೇವಿ ಮಂದಿರದ ಪ್ರಾಂಗಣ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಸಂದರ್ಭದಲ್ಲಿ ಕಮೀಟಿಯ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಅಸಪಅಲಿ ಮುಲ್ಲಾ, ಕಾಶಿಮ ಮುಲ್ಲಾ,ಹಸನಲಿ ಮುಲ್ಲಾ,ಸುಭಾನಿ ಮುಲ್ಲಾ, ಜಾಕೀರ್ ಮುಲ್ಲಾ, ದಾವುದ ಮುಲ್ಲಾ,ಸಾಸೀರ ಮುಲ್ಲಾ,ಮೌಲಾ ಮುಲ್ಲಾ, ರಫೀಕ್ ಜಮಾದಾರ,ಲಾಜಮ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.