ಪರಮಾನಂದವಾಡಿ ಶಿಕ್ಷಕ ರಾಜು ಮಹದೇವ ಶಿರಗೂರ ರವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸತ್ಕಾರ

Share the Post Now

ಬೆಳಗಾವಿ

ಪರಮಾನಂದವಾಡಿ :ಕಡು ಬಡತನದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಪ್ರೌಢ ಶಿಕ್ಷಣವನ್ನು ಎಸ್ ಆರ್ ದಳವಾಯಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾರೂಗೇರಿಯ ಶ್ರೀ ಚನ್ನ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ PUC ಮತ್ತು ಪದವಿಯನ್ನು ಪೂರೈಸಿ ಉನ್ನತ ವಿದ್ಯಾಭಾಸಕ್ಕಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿಯ TMAE ಮಹಾವಿದ್ಯಾಲಯದಲ್ಲಿ B.ed ಪದವಿಯನ್ನು ಪೂರೈಸಿ ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ MA ಪದವಿಯನ್ನು ಪಡೆದುಕೊಂಡು 2004 ರಲ್ಲಿ ಕೇಂದ್ರ ಸರ್ಕಾರದ ಜವಾಹರ ನವೋದಯ ವಿದ್ಯಾಲಯದಲ್ಲಿ ಸೇವೆಗೆ ಸೇರಿ ಛತ್ತೀಸಘಡ ರಾಜ್ಯದ ದಂತೆವಾಡ ವಿದ್ಯಾಲಯದಲ್ಲಿ 2 ವರ್ಷ, ಮಧ್ಯಪ್ರದೇಶ ರಾಜ್ಯದ ಟಿಕಮಘಡ ಮತ್ತು ಶಿವನಿ ವಿದ್ಯಾಲಯದಲ್ಲಿ ಒಂದೊಂದು ವರ್ಷ, ಉತ್ತರಖಂಡ ರಾಜ್ಯದ ಹರಿದ್ವಾರ ವಿದ್ಯಾಲಯದಲ್ಲಿ 2 ವರ್ಷ, ಉತ್ತರ ಪ್ರದೇಶ ರಾಜ್ಯದ ಕಾನ್ಪುರ ವಿದ್ಯಾಲಯದಲ್ಲಿ 12 ವರ್ಷ ಸೇವೆಯನ್ನು ಸಲ್ಲಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 18 ವರ್ಷ ಶಿಕ್ಷಕ ವೃತ್ತಿಯನ್ನು ಪೂರೈಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕರಾಗಿ ಕನ್ನಡವನ್ನು ಓದಲು ಬರೆಯಲು ಕಲಿಸಿ ಕನ್ನಡದ ಕಂಪನ್ನು ಪಸರಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿ ಜೊತೆ ಜೊತೆಗೆ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಹೆಸರನ್ನು ವಿವಿಧ ರಾಜ್ಯದ ವಿದ್ಯಾಲಯಗಳಲ್ಲಿ ಗ್ರಾಮದ ಹೆಸರನ್ನು ಛಾಪು ಮೂಡಿಸಿ ಪ್ರಸ್ತುತ ನಮ್ಮ ರಾಜ್ಯದ ವಿದ್ಯಾ ಕಾಶಿ ಎಂದೆ ಹೆಸರುವಾಸಿಯಾದ ಧಾರವಾಡ ಜವಾಹರ ನವೋದಯ ವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ. ಗ್ರಾಮದ ಶಿಕ್ಷಕ ಶ್ರೀ ರಾಜು ಮಹದೇವ ಶಿರಗೂರ ಅವರನ್ನು ಇತ್ತೀಚೆಗೆ ನಡೆದ ರಾಯಬಾಗ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿಷಯದಲ್ಲಿ ದೇಶದ ಹಲವಾರು ರಾಜ್ಯಗಳಿಗೆ ಮಾಡಿರುವ ಇವರ ಅಪಾರ ಸೇವೆಯನ್ನು ಪರಿಗಣಿಸಿ ಇವರನ್ನು ಸತ್ಕರಿಸಿ ಗೌರವಿಸಿ ಅಭಿನಂದಿಸಲಾಯಿತು. ಈ ಸತ್ಕಾರ ಕಾರ್ಯಕ್ರಮದಲ್ಲಿ ಕಸಾಪ ತಾಲೂಕ ಅಧ್ಯಕ್ಷ ರವೀಂದ್ರ ಪಾಟೀಲ, ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು, ಸಮ್ಮೇಳನದ ಅಧ್ಯಕ್ಷ ಧರ್ಮಣ್ಣ ನಾಯಿಕ, ಆಯ್.ಆರ್.ಮಠಪತಿ, ಶಂಕರ ಕ್ಯಾಸ್ತಿ, ಡಾ.ಲಕ್ಷ್ಮಣ ಚೌರಿ,ಬಸವರಾಜ ಸನದಿ, ಡಾ.ರತ್ನಾ ಬಾಳಪ್ಪನವರ, ಟಿ.ಎಸ್.ವಂಟಗೋಡೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.



ವರದಿ :ಸುನೀಲ್ ಕಬ್ಬೂರ

Leave a Comment

Your email address will not be published. Required fields are marked *

error: Content is protected !!