ಬೆಳಗಾವಿ.ಕುಡಚಿ
ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮೇಲೆತ್ತುವ ಕಾರ್ಯ ಮಾಡಬೇಕು. ಪಾಲಕರು ಮಕ್ಕಳ ಮುಂದೆ ಶಿಕ್ಷಕರನ್ನು ದ್ವೇಶಿಸಬೇಡಿ ಮಕ್ಕಳ ಎದುರಿಗೆ ಮೊಬೈಲ್ ಬಳಸದೆ ನೀವು ಮಕ್ಕಳ ಗೃಹಪಾಠ ಪರಿಶೀಲಿಸಿ ಮಾಡಬೇಕು ಎಂದು ಬಿಆರಸಿ ಬಸವರಾಜ ಕಾಂಬಳೆ ಹೇಳಿದರು.
ಅವರು ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ನಮ್ಮ ಕನ್ನಡ ಶಾಲೆ ಬೆಳೆಯಬೇಕು ಸರ್ಕಾರಿ ಶಾಲೆಯಲ್ಲಿ ಕಲಿತು ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.
ನಂತರ ಡಯಟ್ ಉಪನ್ಯಾಸಕ ಕುಮಾರ್ ಮಾತನಾಡಿ
ವಿದ್ಯಾರ್ಥಿಗಳು ಬದುಕಿನಲ್ಲಿ ಯಾವತ್ತು ಉತ್ಸಾಹ ಕಳೆದುಕೋಳ್ಳಬಾರದು, ಮಕ್ಕಳ ಶಿಕ್ಷಣ ಮಟ್ಟ ಒಳ್ಳೆಯದಾಗಲು ಶಿಕ್ಷಕರು ಮಕ್ಕಳು ಅಷ್ಟೆ ಅಲ್ಲದೆ ಪಾಲಕರು ಕೈ ಜೋಡಿಸಿದರೆ ಜೀವನ ಬೆಳಗುವುದು, ಸರ್ಕಾರಿ ಶಾಲೆಗಳು ಸರ್ಕಾರದ ಜೊತೆಗೆ ಸಾರ್ವಜನಿಕರು ಕೈ ಜೊಡಿಸಿದ್ದೆ ಆದಲ್ಲಿ ಸರ್ಕಾರಿ ಶಾಲೆಗಳ ಉಳಿಯುತ್ತವೆ ಎಂದರು.
ಇದೇ ಸಮಯದಲ್ಲಿ ಏಳನೇಯ ತರಗತಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಿವಾನಂದ ಹೆಗಡೆ, ಮುರಾರಿ ಬಾನೆ, ವಾಮನ ಹಟ್ಟಿಮನಿ, ಪರಶುರಾಮ ಕೊಳೇಕರ, ಸಿಆರಪಿ ಕೋಳಿ, ಪಿ.ಎಸ.ಕಾಂಬಳೆ, ಡಯಟ್ ಪ್ರಾಧ್ಯಾಪಕ ಕುಮಾರ್, ಕೊಕಟನೂರ, ಬಿಆರಸಿ ಬಸವರಾಜ ಕಾಂಬಳೆ, ಮುಖ್ಯೋಪಾಧ್ಯಾಯ ಝಡ.ಆರ.ಮುಲ್ಲಾ, ಎಸ್ಡಿಎಂಸಿ ಪರಶುರಾಮ ಬಾನೆ, ಮಾಲಿಂಗ ಹೆಗಡೆ, ಸುಭಾಷ್ ಮಾಳಿ, ಖೋತ, ಶ್ರೀಧರ ಚೌಗಲಾ ಇತರರು ಉಪಸ್ಥಿತರಿದ್ದರು
