ವರದಿ : ಸಂಗಮೇಶ ಹಿರೇಮಠ
ರಾಯಬಾಗ.ಮುಗಳಖೋಡ : ರಾಯಬಾಗ ತಾಲೂಕ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಹಂದಿಗುಂದದ ಅರುಣೋದಯ ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಯ ಕಬ್ ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಕೌಟ್ಸ್ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅರುಣೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ಖಾನಗೌಡ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ .
ಈ ಸಂದರ್ಭದಲ್ಲಿ ಪ್ರಧಾನ ಗುರು ಎನ್ ಡಿ ಜಾದವ, ಕಬ್ ಹಾಗೂ ಸ್ಕೌಟ್ಸ್ ಶಿಕ್ಷಕ ಸಿ. ಎಸ್. ಹಿರೇಮಠ, ಹಿರಿಯ ಶಿಕ್ಷಕ ಫಕೀರಪ್ಪ ಸಣ್ಣಹುಡುಗನವರ, ರಾಮಕೃಷ್ಣ ಬನಾಜ, ಶಾಂತಕುಮಾರ ಬೆಳಿಕಟ್ಟಿ, ವಾಯ ಎಸ ಜಕನೂರ, ಗುರುಮಾತೆಯರು ಇದ್ದರು.