ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಅರ್ಜಿ ಸಲ್ಲಿಕೆ ಆಹ್ವಾನ ಕರೆಯಲಾಗಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀ ಲಕ್ಷ್ಮೀ ಹೆಬ್ಬಾಳಕರ ಅವರು ಗ್ರಾಮ ಒನ್ ಸಿಬ್ಬಂದಿ ವರ್ಗ ಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಅದರ ಬೆನ್ನಲ್ಲೆ ರಾಜ್ಯದಲ್ಲಿ ಸರ್ವರ್ ಸಮಸ್ಯೆ ಹೆಚ್ಚುತ್ತಿದೆ,ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯ ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ APL ರೇಷನ ಕಾರ್ಡ್ ಅಪಡೇಟ ಮಾಡುವಾಗ ಸರ್ವರ್ ಸಮಸ್ಯೆ ಎದುರಾಗಿದೆ .
ಗೃಹ ಲಕ್ಷ್ಮೀ ಯೊಜನೆಗೆ ಅರ್ಜಿ ಸಲ್ಲಿಸಿಕೆಗಾಗಿ ರೇಷನ ಕಾರ್ಡ್ ಅಪಡೇಟಗಾಗಿ ಸರದಿ ಸಾಲಿನಲ್ಲಿ ನಿಂತಿದ್ದೇವೆ ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಕೆಲಸದ ವೇಳೆಯಲ್ಲಿ ಊಟಕ್ಕೆ ಹೋಗುತ್ತಾರೆ ಅವರಿಗೆ ಬೇಕಾದ ಜನಗಳ ಕೆಲಸ ಮೋದಲು ಮಾಡುತ್ತಿದ್ದಾರೆ ಬೆಳಿಗ್ಗೆ ಇಂದ ತಿಂಡಿ ತಿನ್ನದೆ ಕಾಯುತ್ತಿದ್ದೆವೆ
ಎಂದು ಅಳಲನ್ನು ಮಾಧ್ಯಮಗಳ ಜೊತೆಗೆ ಸಾರ್ವಜನಿಕ ತೊಡಿಕೊಂಡಿದ್ದಾರೆ .
ಆಹಾರ ಇಲಾಖೆ ನಿರ್ದೇಶಕ ಕಂಕಣವಾಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಸರ್ಕಾರದ ಗ್ಯಾರಂಟಿ ಯೋಜನೆ ಅಡಿಯಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯ ಯಶಸ್ವಿಯಾಗುತ್ತಿದೆ APL ರೇಷನ ಕಾರ್ಡ್ ದಾರರಿಗೆ ಈ ಯೋಜನೆ ಕಲ್ಪಿಸಿದ್ದೇವೆ ,ಜನ ದಟ್ಟನೆ ಇಂದಾಗಿ ಸ್ವಲ್ಪ ಅಸ್ತವ್ಯಸ್ತವಾಗುತ್ತಿದೆ ಕೂಡಲೆ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿ ಮಾಡಿ ಜನರ ಕೆಲಸ ಬೇಗ ಮಾಡಿಕೊಡಲು ಸೂಚಿಸುತ್ತೆವೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು