ಬೆಳಗಾವಿ. ರಾಯಬಾಗ
ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ
ರಾಯಬಾಗ: ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರದಿದ್ದಾರೆ.
ಕಲಾ ವಿಭಾಗದಲ್ಲಿ ಗೌರವ್ವ ತೇರದಾಳ 93%, ಅನಿತಾ ಕಡಕೋಳ 90%, ಲಕ್ಷ್ಮೀ ಹಿಪ್ಪರಗಿ 89%, ಪ್ರೀತಿ ಕುಲಿಗೋಡ 88.66%, ಭೀಮಪ್ಪ ಬೋರಗಾಂವ 87.56%, ಲಕ್ಷ್ಮಿ ಬಳೆಗಾರ 86% ಅಂಗಳನ್ನು ಪಡೆದುಕೊಂಡರೆ, ವಾಣಿಜ್ಯ ವಿಭಾಗದಲ್ಲಿ ಶ್ರೇಯಾ ಮಾಳಿ 91.50%, ಕಾವೇರಿ ತೂಗದಲಿ 91.50%, ಭೂಮಿಕ ಅಂಕಲೆ 89.18%, ಅಕ್ಷತಾ ಶೇಗುಣಿಸಿ 88.16% ಹಾಗೂ ಹೇಮಾ ಗುರವ 87% ಅಂಕಗಳನ್ನು ಪಡೆದುಕೊಂಡಿದ್ದಾರೆ.
ಅದೇ ರೀತಿ ಶಿಕ್ಷಣ ವಿಭಾದಲ್ಲಿ ಸವಿತಾ ಬೆಟಗೇರಿ 80.83%, ಸೋನಾಲಿ ಗೌವಲತ್ತಿನವರ 75.33% ಹಾಗೂ ನಾಗವೇಣಿ ಚೆನ್ನನವರ 69.88% ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಶಿಕ್ಷಣ ಸಂಸ್ಥೆಗೆ ಹೆಸರು ತಂದಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಯ ಸಮಸ್ತ ಆಡಳಿತ ಮಂಡಳಿ ಶಿಕ್ಷಕ ವೃಂದ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದೆ.