ಉತ್ತರ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಸಭೆಉತ್ತರ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಸಭೆ ನಡೆಸಿದರು ಎಡಿಜಿಪಿ ಉಮೇಶ್ ಕುಮಾರ್ ಅವರು ಉತ್ತರ ವಿಭಾಗದ ಎಲ್ಲ ಜಿಲ್ಲೆಗಳು ಹಾಗೂ ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಘಟಕಗಳ ಅಪರಾಧ ಪರಿಶೀಲನಾ ಸಭೆ ನಡೆಸಿದರು.
ಉತ್ತರ ವಿಭಾಗದ ಇನ್ಸ್ ಪೆಕ್ಟರ್ ಜನರಲ್ ಐಜಿಪಿ ವಿಕಾಸ್ ಕುಮಾರ್, ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್, ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್, ಉತ್ತರ ವಿಭಾಗದ ಎಸ್ಪಿಗಳಾದ ಬಾಗಲಕೋಟ,
ಗದಗ, ವಿಜಯಪುರ, ಹಾವೇರಿ, ಧಾರವಾಡ, ಎಲ್ಲ ಜಿಲ್ಲೆಗಳ ಅಧೀಕ್ಷಕರು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.